ವೃದ್ದೆ ತಾಯಿಗೆ ಚಿತ್ರ ಹಿಂಸೆ : ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ - Karavali Times ವೃದ್ದೆ ತಾಯಿಗೆ ಚಿತ್ರ ಹಿಂಸೆ : ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ - Karavali Times

728x90

17 July 2020

ವೃದ್ದೆ ತಾಯಿಗೆ ಚಿತ್ರ ಹಿಂಸೆ : ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ
 ಬೆಳ್ತಂಗಡಿ (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಸವಣಾಲು ಎಂಬಲ್ಲಿ ಅನಾರೋಗ್ಯ ಪೀಡಿತ ವಯೋವೃದ್ದ ಮಹಿಳೆಯೋರ್ವರನ್ನು ಆಕೆಯ ಮಗ ಹಾಗೂ ಮೊಮ್ಮಗ ಹಿಂಸಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಘಟಣೆಯ ಬಗ್ಗೆ ತನಿಖೆ ನಡೆಸಲಾಗಿ 70 ವರ್ಷದ ವೃದ್ದ ಮಹಿಳೆ ಬೆಳ್ತಂಗಡಿ ಯ ಸವಣಾಲು ಹಲಸಿನಕಟ್ಟೆ  ನಿವಾಸ ಯಾಗಿದ್ದು, ಆರೋಪಿಗಳಾದ ಸದರಿ ವೃದ್ದೆಯ ಮಗ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್‌  ಶೆಟ್ಟಿ ಎಂಬವರುಗಳು ಮನೆಯಲ್ಲಿ ಅಮಾನೀಯವಾಗಿ ಹಿಂಸಿಸಿರುವುದು ಸಾಬೀತಾಗಿದೆ. ಈ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕಲಂ : 323, 504 IPC & 24 senior citizen  act 2007ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವೃದ್ದೆ ತಾಯಿಗೆ ಚಿತ್ರ ಹಿಂಸೆ : ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ Rating: 5 Reviewed By: karavali Times
Scroll to Top