ದೇರಳಕಟ್ಟೆ : ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸದಸ್ಯತ್ವ ನೋಂದಾವಣೆಗೆ ಚಾಲನೆ - Karavali Times ದೇರಳಕಟ್ಟೆ : ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸದಸ್ಯತ್ವ ನೋಂದಾವಣೆಗೆ ಚಾಲನೆ - Karavali Times

728x90

10 July 2020

ದೇರಳಕಟ್ಟೆ : ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸದಸ್ಯತ್ವ ನೋಂದಾವಣೆಗೆ ಚಾಲನೆ
ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನ ಪೂರ್ವ ವಲಯದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸದಸ್ಯತ್ವ ನೋಂದಾವಣೆಗೆ ದೇರಳಕಟ್ಟೆ ಜಲಾಲ್ ಭಾಗ್ ನಲ್ಲಿರುವ ಟೇಸ್ಟಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೋವಿಡ್ ಲಾಕ್ ಡೌನ್ ನಂತರ ಬಸ್ಸು ನೌಕರರು ಅತೀ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಕಡೆ ಹೆಚ್ಚಿನ ಬಸ್ಸು ನೌಕರರು ಕೆಲಸವಿಲ್ಲದೇ ಕಂಗಾಲಾಗಿದ್ದರೆ ಇನ್ನೊಂದೆಡೆ ಕೋವಿಡ್ ಹೆಸರಿನಲ್ಲಿ ಇಲ್ಲಿನ ಆಸ್ಪತ್ರೆಗಳು ಲೂಟಿಗೆ ಇಳಿದಿದೆ. ಹೀಗಿರುವಾಗ ಈಗ ಇಲ್ಲಿ ಸಂಚರಿಸುತ್ತಿರುವ ಸೀಮಿತ ಸಂಖ್ಯೆಯ ಬಸ್ಸುಗಳ ಚಾಲಕ, ನಿರ್ವಾಹಕರು ಕೊರೊನಾ ಭೀತಿಯ ನಡುವೆಯೇ ಕೆಲಸ ಮಾಡುತ್ತಿದ್ದು ಇವರನ್ನು ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು, ಕಾರ್ಯದರ್ಶಿ ಜಗದೀಶ್, ಕೋಶಾಧಿಕಾರಿ ಮಹಮ್ಮದ್ ಅಶ್ರಫ್, ಡಿವೈಎಫ್ಐ ಜಿಲ್ಲಾ ನಾಯಕ ರಫೀಕ್ ಹರೇಕಳ, ಶ್ರೀನಾಥ್ ಕುಳಾಯಿ, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ , ಹಿರಿಯ ಬಸ್ಸು ಚಾಲಕ ಮುನೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಝೀರ್ ಕಾರ್ಯಕ್ರಮ ನಿರ್ವಹಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ದೇರಳಕಟ್ಟೆ : ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸದಸ್ಯತ್ವ ನೋಂದಾವಣೆಗೆ ಚಾಲನೆ Rating: 5 Reviewed By: karavali Times
Scroll to Top