ಸಂಡೇ ಲಾಕ್ ಡೌನ್ : ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ಥಬ್ದ - Karavali Times ಸಂಡೇ ಲಾಕ್ ಡೌನ್ : ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ಥಬ್ದ - Karavali Times

728x90

26 July 2020

ಸಂಡೇ ಲಾಕ್ ಡೌನ್ : ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ಥಬ್ದಮಂಗಳೂರು (ಕರಾವಳಿ ಟೈಮ್ಸ್) : ಸಂಡೇ ಲಾಕ್‍ಡೌನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಇಂದು ಜಿಲ್ಲೆ ಅಕ್ಷರಶಃ ಸ್ತಬ್ಧವಾಗಿದೆ.

 ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಸಂಪೂರ್ಣ ಲಾಕ್ ಡೌನ್ ಇದ್ದು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ. ಆರೋಗ್ಯ ಸೇವೆ, ಹಾಲು, ಪತ್ರಿಕೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಸಂಪೂರ್ಣ ಬಂದ್ ಆಗಿದ್ದು, ಯಾವುದೇ ವಾಹನಗಳ ಓಡಾಟಗಳೂ ಕಂಡು ಬರುತ್ತಿಲ್ಲ.

 ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹಾಗೂ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ.

ಶನಿವಾರದ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, 218 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,607ಕ್ಕೇರಿಕೆಯಾಗಿದೆ. ಶನಿವಾರ 140 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 115 ಜನ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು, ಪ್ರಸ್ತುತ 2,370 ಸಕ್ರಿಯ ಪ್ರಕರಣಗಳಿದ್ದು, ಇನ್ನೂ ಆತಂಕ ದೂರವಾಗಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಸಂಡೇ ಲಾಕ್ ಡೌನ್ : ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ಥಬ್ದ Rating: 5 Reviewed By: karavali Times
Scroll to Top