ಕಡಬ : ಲಾಕ್ ಡೌನ್ ಉಲ್ಲಂಘಿಸಿದ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲು - Karavali Times ಕಡಬ : ಲಾಕ್ ಡೌನ್ ಉಲ್ಲಂಘಿಸಿದ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲು - Karavali Times

728x90

22 July 2020

ಕಡಬ : ಲಾಕ್ ಡೌನ್ ಉಲ್ಲಂಘಿಸಿದ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲುಕಡಬ (ಕರಾವಳಿ ಟೈಮ್ಸ್) : ತಾಲೂಕಿನ ಏನೇಕಲ್ಲು ಗ್ರಾಮದ ಚೋಳುಗುಳು ಮಾಟ ಎಂಬಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಗುಂಪಾಗಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ನಾಲ್ವರು ಯುವಕರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬುಧವಾರ ಪಕರಣ ದಾಖಲಾಗಿದೆ.

ಬುಧವಾರ ಬೆಳಗಿನ ಜಾವ 2-30 ಗಂಟೆಗೆ ಪುತ್ತೂರು ತಾಲೂಕು, ಸವಣೂರು ಗ್ರಾಮದ ನಿವಾಸಿಗಳಾದ ಬಶೀರ್ ನರಿಮೊಗರು, ಅಬ್ದುಲ್ ರಝಾಕ್,  ಬಶೀರ್ ಸವಣೂರು ಹಾಗೂ ಅಬ್ದುಲ್ ಸಮದ್ ಎಂಬವರು ಗುಂಪಾಗಿ ಸೇರಿ ಸಾರ್ವಜನಿಕ ಹೊಳೆಯಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿದ್ದರು.

 ಈ ಬಗ್ಗೆ ಕಡಬ ಏನೆಕಲ್ ನಿವಾಸಿ ಉದಯ್ ಕುಮಾರ್ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ 269, 270, ಐಪಿಸಿ ಮತ್ತು ಕಲಂ 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಅದ್ಯಾಧೇಶ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಲಾಕ್ ಡೌನ್ ಉಲ್ಲಂಘಿಸಿದ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top