ವಿಚ್ಛೇದಿತ ಪತಿ ಕಡೆಯ 139 ಮಂದಿಯಿಂದ ಅತ್ಯಾಚಾರ : 25ರ ಯುವತಿಯಿಂದ ತಡವಾಗಿ ಪೊಲೀಸ್ ದೂರು - Karavali Times ವಿಚ್ಛೇದಿತ ಪತಿ ಕಡೆಯ 139 ಮಂದಿಯಿಂದ ಅತ್ಯಾಚಾರ : 25ರ ಯುವತಿಯಿಂದ ತಡವಾಗಿ ಪೊಲೀಸ್ ದೂರು - Karavali Times

728x90

21 August 2020

ವಿಚ್ಛೇದಿತ ಪತಿ ಕಡೆಯ 139 ಮಂದಿಯಿಂದ ಅತ್ಯಾಚಾರ : 25ರ ಯುವತಿಯಿಂದ ತಡವಾಗಿ ಪೊಲೀಸ್ ದೂರು

 

ಘಟನೆಗೆ ಸಂಬಂಧಿಸಿ ಪೊಲೀಸರಿಂದ 42 ಪುಟಗಳ ಸುದೀರ್ಘ ಎಫ್‍ಐಆರ್ ದಾಖಲು


ಹೈದ್ರಾಬಾದಿನಲ್ಲಿ ನಡೆದ ಘೋರ ಕೃತ್ಯ ತಡವಾಗಿ ಬೆಳಕಿಗೆ 


ಹೈದರಾಬಾದ್ (ಕರಾವಳಿ ಟೈಮ್ಸ್) : 25 ವರ್ಷದ ಮಹಿಳೆಯೋರ್ವರು ಕೆಲ ವರ್ಷಗಳಿಂದ 139 ಮಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾರೆ. ಸಂತ್ರಸ್ತ ಯುವತಿ 2010ರಲ್ಲಿ ವಿವಾಹವಾಗಿದ್ದು, ಒಂದೇ ವರ್ಷದೊಳಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ತನ್ನ ವಿಚ್ಛೇದಿತ ಪತಿ ಕಡೆಯ ಕೆಲವು ಕುಟುಂಬ ಸದಸ್ಯರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅವರು ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ನೀಡಿದ ದೂರಿನ ಬಳಿಕ ಪೆÇಲೀಸರು ಐಪಿಸಿ ಸೆಕ್ಷನ್ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಸುಮಾರು 42 ಪುಟಗಳ ಎಫ್‍ಐಆರ್ ತಯಾರಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ಇದೀಗ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. 

ದೂರಿನ ನಂತರ ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡಿದ್ದೇವೆ. ಮಹಿಳೆಯ ದೂರಿನ ಪ್ರಕಾರ, ಕಳೆದ ಕೆಲ ವರ್ಷಗಳಿಂದ 139 ಜನರು ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಬೆದರಿಕೆ ಮತ್ತು ಶೋಷಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯ ಮತ್ತು ಆರೋಪಿಗಳ ಬೆದರಿಕೆಗಳಿಂದಾಗಿ ನಾನು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.  • Blogger Comments
  • Facebook Comments

0 comments:

Post a Comment

Item Reviewed: ವಿಚ್ಛೇದಿತ ಪತಿ ಕಡೆಯ 139 ಮಂದಿಯಿಂದ ಅತ್ಯಾಚಾರ : 25ರ ಯುವತಿಯಿಂದ ತಡವಾಗಿ ಪೊಲೀಸ್ ದೂರು Rating: 5 Reviewed By: karavali Times
Scroll to Top