ತಲೆಮೊಗರು ಅಕ್ರಮ ಮರಳುಗಾರಿಕೆ : ನಾಲ್ವರ ವಿರುದ್ದ ತಹಶೀಲ್ದಾರ್ ಗೆ ಲಿಖಿತ ದೂರು - Karavali Times ತಲೆಮೊಗರು ಅಕ್ರಮ ಮರಳುಗಾರಿಕೆ : ನಾಲ್ವರ ವಿರುದ್ದ ತಹಶೀಲ್ದಾರ್ ಗೆ ಲಿಖಿತ ದೂರು - Karavali Times

728x90

28 August 2020

ತಲೆಮೊಗರು ಅಕ್ರಮ ಮರಳುಗಾರಿಕೆ : ನಾಲ್ವರ ವಿರುದ್ದ ತಹಶೀಲ್ದಾರ್ ಗೆ ಲಿಖಿತ ದೂರು





ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಿಂದ ರಾತ್ರಿ ವೇಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿ ರಿಯಾಝ್ ಕೋಟೆಕಣಿ ಅವರು ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರಿಗೆ ಶುಕ್ರವಾರ ಲಿಖಿತ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. 

ಆರೋಪಿಗಳಾದ ಝುಬೈರ್ ತಲೆಮೊಗರು, ಸೈದುದ್ದೀನ್ ತಲೆಮೊಗರು, ಅಬ್ದುಲ್ ಲತೀಫ್ ತಲೆಮೊಗರು ಹಾಗೂ ಶರೀಫ್ ತಲೆಮೊಗರು ಎಂಬವರು ಕೆಎ 19 ಎಎ2407 ಸಂಖ್ಯೆಯ ವಾಹನದ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದು, ಸ್ಥಳೀಯವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸವಾಲಾಗಿದ್ದಾರೆ. ಈ ಹಿಂದೆ ಇಲ್ಲಿನ ಸರಕಾರಿ ಶಾಲಾ ಕಟ್ಟಡ ನಿರ್ಮಾಣದ ವೇಳೆ ಗೋಣಿ ಚೀಲದ ಮೂಲಕ ನದಿ ದಡದಿಂದ ಮರಳು ತೆಗೆಯುತ್ತಿದ್ದ ಬಗ್ಗೆ ಅಕ್ರಮ ಮರಳುಗಾರಿಕೆ ಎಂದು ತಹಶೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಿದವರೇ ಇದೀಗ ಮಸೀದಿ ಹೆಸರಿನಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಬುಧವಾರ ರಾತ್ರಿ ಅಕ್ರಮ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿದ್ದ ವೇಳೆ ಸ್ಥಳೀಯರೇ ರೆಡ್ ಹ್ಯಾಂಡಾಗಿ ತಡೆ ಹಿಡಿದಿದ್ದಾರೆ ಎಂದು ರಿಯಾಝ್ ದೂರಿನಲ್ಲಿ ತಿಳಿಸಿದ್ದಾರೆ. 

ಆರೋಪಿಗಳು ತಮ್ಮ ಮನೆ ಕೆಲಸ ಕಾಮಗಾರಿಗಳನ್ನು ಕೂಡಾ ಇದೇ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸಿದವರಾಗಿದ್ದಾರೆ ಎಂದು ದೂರಿರುವ ರಿಯಾಝ್ ಕೋಟೆಕಣಿ ಆರೋಪಿಗಳ ಈ ಅಕ್ರಮ ಮರಳುಗಾರಿಕೆಯಿಂದಾಗಿ ಸ್ಥಳೀಯವಾಗಿ ಯುವಕ ಮಧ್ಯೆ ಗುಂಪುಗಾರಿಕೆ ಉಂಟಾಗಿ ಸಮಾಜದ ಸ್ವಾಸ್ಥ್ಯಕ್ಕೂ ಧಕ್ಕೆಯಾಗುತ್ತಿದೆ. ಪರಿಸ್ಥಿತಿ ಕೈ ಮೀರುವ ಮುಂಚಿತವಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 








  • Blogger Comments
  • Facebook Comments

0 comments:

Post a Comment

Item Reviewed: ತಲೆಮೊಗರು ಅಕ್ರಮ ಮರಳುಗಾರಿಕೆ : ನಾಲ್ವರ ವಿರುದ್ದ ತಹಶೀಲ್ದಾರ್ ಗೆ ಲಿಖಿತ ದೂರು Rating: 5 Reviewed By: karavali Times
Scroll to Top