ಬಂಟ್ವಾಳ, ಸೆ. 28, 2020 (ಕರಾವಳಿ ಟೈಮ್ಸ್) : ವೃದ್ದರೋರ್ವರು ಭಾನುವಾರ ರಾತ್ರಿ ವೇಳೆ ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಇಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು 65-70 ವರ್ಷ ಅಂದಾಜು ವಯಸ್ಸಿನ ವ್ಯಕ್ತಿಯ ಗುರುತು ಪರಿಚಯ ತಿಳಿದು ಬಂದಿಲ್ಲ. ನೇತ್ರಾವತಿ ಸೇತುವೆಯ ಮೇಲೆ ಓರ್ವನೇ ಬಂದ ವೃದ್ದ ವ್ಯಕ್ತಿ ಏಕಾಏಕಿ ನೀರಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಗೂಡಿನಬಳಿ ಪರಿಸರದ ಯುವಕರು ತಕ್ಷಣ ನದಿಗಿಳಿದು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ವಾರೀಸುದಾರರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
0 comments:
Post a Comment