ಸುಳ್ಯ, ಸೆ. 30, 2020 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಮಡ್ಕ ನಿವಾಸಿ ಶ್ಯಾಮ್ ಎಂಬಾತ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಪ್ರಾಪ್ತ ಬಾಲಕಿ ಸ್ನಾನದ ಕೊಠಡಿಯಲ್ಲಿರುವ ವೇಳೆ ಮೊಬೈಲ್ ವೀಡಿಯೋ ಚಿತ್ರೀಕರಣ ಮಾಡಿದ್ದಲ್ಲದೆ ಆಕೆಯ ತಂದೆಗೆ ಹಲ್ಲೆ ಯತ್ನ ನಡೆಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ. 26 ರಂದು ಆರೋಪಿ ಅಪ್ರಾಪ್ತ ಬಾಲಕಿ ಸ್ನಾನದ ಕೊಠಡಿಯಲ್ಲಿದ್ದ ವೇಳೆ ದಶ್ಯವನ್ನು ಮೊಬೈಲ್ ವೀಡಿಯೋ ಮೂಲಕ ಚಿತ್ರೀಕರಣ ನಡೆಸಿದ್ದು, ಈ ಸಂದರ್ಭ ಬಾಲಕಿಯ ತಾಯಿ ಆರೋಪಿಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದರಾದರೂ ಯಶಸ್ವಿಯಾಗಿಲ್ಲ. ಈ ವೇಳೆ ಆರೋಪಿ ಮೊಬೈಲ್ ಎಳೆದುಕೊಂಡು ಪರಾರಿಯಾಗಿರುತ್ತಾನೆ. ಈ ಕೃತ್ಯದ ಬಗ್ಗೆ ಆರೋಪಿಯ ತಂದೆಯ ಬಳಿ ಬಾಲಕಿಯ ತಾಯಿ ತಿಳಿಸಿದ್ದಾರೆ ಎಂಬ ದ್ವೇಷದಿಂದ ಆರೋಪಿಯು ಬಾಲಕಿಯ ತಂದೆಗೆ ಹಲ್ಲೆ ನಡೆಸಲು ಮುಂದಾಗಿರುತ್ತಾನೆ ಎಂದು ಬಾಲಕಿಯ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಕಲಂ 10, 14 ಪೆÇೀಕ್ಸೋ ಕಾಯ್ದೆ 2012 ಮತ್ತು ಕಲಂ 354(ಸಿ ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Visit and subscribe our YouTube channel 👇 Niyaz Entertainments
ReplyDeletehttps://www.youtube.com/channel/UCaI9exE9jsc0HTx6kKF0hhQ