ಬಂಟ್ವಾಳ, ಸೆ. 15, 2020 (ಕರಾವಳಿ ಟೈಮ್ಸ್) : ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಮಂಗಳವಾರ ನೆರೆವೇರಿಸಿದರು.
ಪಿಲಿಂಜ ರಸ್ತೆ ಕಾಮಾಗಾರಿಗೆ 4.25 ಲಕ್ಷ, ನೆಟ್ಲ ಕೇನ್ಲ ರಸ್ತೆಗೆ 3.75 ಲಕ್ಷ, ನೆಟ್ಲ ಶಾಲಾಬಳಿ ಕುಡಿಯುವ ನೀರಿನ ಟ್ಯಾಂಕಿಗೆ 8.5 ಲಕ್ಷ, ನೆಟ್ಲ ಕಲ್ಲಗುಡ್ಡೆ ರಸ್ತೆಗೆ 4.5 ಲಕ್ಷ ಪಂಚಾಯತ್ ಅನುದಾನದ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾ.ಪಂ. ಸದಸ್ಯ ಮಹಾಬಲ ಆಳ್ವ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ, ನರಿಕೊಂಬು ಗ್ರಾ ಪಂ ನಿಕಟಪೂರ್ವಾಧ್ಯಕ್ಷ ಯಶೋಧರ ಕರ್ಬೆಟ್ಟು, ಪ್ರಮುಖರಾದ ವಜ್ರನಾಥ ಕಲ್ಲಡ್ಕ, ಗಿರೀಶ್ ಕುಲಾಲ್, ಗುರುವಪ್ಪ ಗೌಡ, ಸುಚಿತ್ರ ಗಟ್ಟಿ, ಪೂರ್ಣಿಮ ಶ್ರೀಧರ ರಾವ್, ಯೋಗಿಶ್ ಗಟ್ಟಿ, ಮುತ್ತುರಾಜ್, ನವೀನ್ ಗಟ್ಟಿ, ಕುಮಾರಸ್ವಾಮಿ, ನವೀನ್ ಶೆಟ್ಟಿ, ಅನಿಶ್ ದೇವಾಡಿಗ, ಅಭಿಷೇಕ್ ಶೆಟ್ಟಿ, ಅಶೋಕ್ ಪಿಲಿಂಜ, ದಯಾನಂದ ಗಟ್ಟಿ, ಸುನೀಲ್ ಗಟ್ಟಿ, ಲೋಕೇಶ್ ಗಟ್ಟಿ, ರಮೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment