ಐಪಿಎಲ್-2020 : ಗಿಲ್-ಮೋರ್ಗನ್ ಜುಗಲ್ ಬಂದಿಗೆ ಸನ್‌ ರೈಸರ್ಸ್‌ ನಿರುತ್ತರ - Karavali Times ಐಪಿಎಲ್-2020 : ಗಿಲ್-ಮೋರ್ಗನ್ ಜುಗಲ್ ಬಂದಿಗೆ ಸನ್‌ ರೈಸರ್ಸ್‌ ನಿರುತ್ತರ - Karavali Times

728x90

26 September 2020

ಐಪಿಎಲ್-2020 : ಗಿಲ್-ಮೋರ್ಗನ್ ಜುಗಲ್ ಬಂದಿಗೆ ಸನ್‌ ರೈಸರ್ಸ್‌ ನಿರುತ್ತರ

 


ದುಬೈ, ಸೆ. 27, 2020 (ಕರಾವಳಿ ಟೈಮ್ಸ್) : ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂ ನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ 7 ವಿಕೆಟ್ ಗಳ ಅರ್ಹ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 142 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಕೆಕೆಆರ್ 18 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗುರಿ ತಲುಪಿದೆ. 

ಹೈದರಾಬಾದ್ ನ ಡೇವಿಡ್ ವಾರ್ನರ್ (36), ಮನೀಶ್ ಪಾಂಡೆ (51) ಹಾಗೂ ವೃದ್ದಿಮಾನ್ ಸಹಾ (30) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೆ ಕೆಕೆಆರ್ ಪರ ಶುಭಮ್ ಗಿಲ್ (70) ಮಾರ್ಗನ್ (42) ಹಾಗೂ ನಿತೀಶ್ ರಾಣಾ (26) ರನ್ ಗಳಿಸಿ ಗಮನ ಸೆಳೆದಿದ್ದರು.

ಕೆಕೆಆರ್ ನ ಪ್ಯಾಟ್ ಕಮ್ಮನ್ಸ್, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರೆಸೆಲ್ ತಲಾ ಒಂದು ವಿಕೆಟ್ ಕಬಳಿಸಿದ್ದರೆ ಹೈದರಾಬಾದ್ ಪರ ಖಲೀಲ್ ಅಹಮದ್, ಟಿ. ನಟರಾಜನ್ ಹಾಗೂ ರಶೀದ್ ಕಾನ್ ತಲಾ ಒಂದು ವಿಕೆಟ್ ಕಿತ್ತಿದ್ದರು.

ಎರಡೂ ತಂಡಗಳು ಈ ಮುನ್ನ ನಡೆದ ಪಂದ್ಯಗಳಲ್ಲಿ ಸೋಲು ಕಂಡಿದ್ದು ಇಂದಿನ ಗೆಲುವು ಕೋಲ್ಕತ್ತಾಗೆ ಈ ಸರಣಿಯಲ್ಲಿ ದೊರೆತ ಮೊದಲ ಗೆಲುವಾಗಿದೆ. 


  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್-2020 : ಗಿಲ್-ಮೋರ್ಗನ್ ಜುಗಲ್ ಬಂದಿಗೆ ಸನ್‌ ರೈಸರ್ಸ್‌ ನಿರುತ್ತರ Rating: 5 Reviewed By: karavali Times
Scroll to Top