ಬಿ.ಸಿ.ರೋಡು-ಕೈಕಂಬ ಅಟೋ ರಿಕ್ಷಾ ನಿಲ್ದಾಣ ಉದ್ಘಾಟನೆ - Karavali Times ಬಿ.ಸಿ.ರೋಡು-ಕೈಕಂಬ ಅಟೋ ರಿಕ್ಷಾ ನಿಲ್ದಾಣ ಉದ್ಘಾಟನೆ - Karavali Times

728x90

27 September 2020

ಬಿ.ಸಿ.ರೋಡು-ಕೈಕಂಬ ಅಟೋ ರಿಕ್ಷಾ ನಿಲ್ದಾಣ ಉದ್ಘಾಟನೆಬಂಟ್ವಾಳ, ಸೆ. 28, 2020 (ಕರಾವಳಿ ಟೈಮ್ಸ್) : ಬಿ.ಸಿ.ರೋಡ್ ಸಮೀಪದ ಕೈಕಂಬದ ಪೊಳಲಿ ದ್ವಾರದ ಬಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ಅಟೋ ರಿಕ್ಷಾ ನಿಲ್ದಾಣವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸೋಮವಾರ ಉದ್ಘಾಟಿಸಿದರು. 

ಇದೇ ವೇಳೆ ಮಾತನಾಡಿದ ಶಾಸಕರು ರಿಕ್ಷಾ ಚಾಲಕರು ಸೇವಾ ಮನೋಭಾವದಿಂದ ದುಡಿಯುವವರಾಗಿದ್ದು, ತಮ್ಮ ನಿತ್ಯ ದುಡಿಮೆಯ ಜೊತೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಯಾವುದೇ ಸಂದರ್ಭ ಜನಸಾಮಾನ್ಯರಿಗೆ ಸ್ಪಂದಿಸುವ ಮೂಲಕ ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಈ ಭಾಗದ ರಿಕ್ಷಾ ಚಾಲಕರ ಬಹುದಿನಗಳ ಬೇಡಿಕೆಯನ್ನು ಇಂದು ಈಡೇರಿಸಿದ್ದು ಮುಂದಿನ ದಿನಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದÀ ಎಲ್ಲಾ ರಿಕ್ಷಾ ನಿಲ್ದಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. 

ಈ ಸಂಧರ್ಭ ಬೂಡ ಅಧ್ಯಕ್ಷರಾದ ಬಿ. ದೇವದಾಸ ಶೆಟ್ಟಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರಮಾನಾಥ ರಾಯಿ, ಪ್ರಕಾಶ್ ಅಂಚನ್, ಗಣೇಶ್ ದಾಸ್, ಮಹಾಬಲ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಸೀತಾರಾಮ ಪೂಜಾರಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಸುದರ್ಶನ್ ಬಜ, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿ’ಮೇಲ್ಲೋ, ಅಶ್ವಥ ರಾವ್ ಬಾಳಿಕೆ, ಪ್ರಮೋದ್ ನೂಜಿಪ್ಪಾಡಿ, ರಿಕ್ಷಾ ಚಾಲಕರ ಸಂಘಟ ಅಧ್ಯಕ್ಷ ಚಿತ್ತರಂಜನ್ ಪೂಜಾರಿ, ಕಾರ್ಯದರ್ಶಿ ಇಸ್ಮಾಯಿಲ್, ಗುತ್ತಿಗೆದಾರ ಕಾರ್ತಿಕ್ ಬಲ್ಲಾಳ್, ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು. 


  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು-ಕೈಕಂಬ ಅಟೋ ರಿಕ್ಷಾ ನಿಲ್ದಾಣ ಉದ್ಘಾಟನೆ Rating: 5 Reviewed By: karavali Times
Scroll to Top