ಬಂಟ್ವಾಳ, ಸೆ. 22, 2020 (ಕರಾವಳಿ ಟೈಮ್ಸ್) : ಕರೋಪಾಡಿ ಗ್ರಾಮದ ಪಳ್ಳದಕೋಡಿ-ಪದ್ಯಾಣ ಎಂಬಲ್ಲಿ 2.25 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕೃತ ರಸ್ತೆಯನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಮಂಗಳವಾರ ಉದ್ಘಾಟಿಸಿದರು.
ಪಳ್ಳದಕೋಡಿ-ಪದ್ಯಾಣ ಭಾಗದ ಜನತೆಗಾಗಿ ಸರ್ವಋತು ರಸ್ತೆಯನ್ನು ನಿರ್ಮಾಣಗೊಳಿಸಿ ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ತನಗಿದೆ ಎಂದು ಶಾಸಕ ನಾಯಕ್ ಇದೇ ವೇಳೆ ತಿಳಿಸಿದರು.
ಈ ಸಂದರ್ಭ ಬುಡಾ ಅದ್ಯಕ್ಷ ಬಿ ದೇವದಾಸ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಈಶ್ವರ ಶಾಸ್ತ್ರಿ, ವಿಘ್ನೇಶ್ವರ ಭಟ್ ಅನೆಯಾಲಕೋಡಿ, ರಘುನಾಥ ಶೆಟ್ಟಿ ಪಟ್ಲಗುತ್ತು, ಬೇತ ಗೋಪಾಲಕೃಷ್ಣ ಭಟ್, ಸುನಿಲ್ ಪದ್ಯಾಣ, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ವಿನೋದ್ ಪಟ್ಲ, ಪದ್ಮನಾಭ ಮುಗುಳಿ, ಕೊಳ್ನಾಡು ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment