ಮಂಗಳೂರು, ಸೆ. 22, 2020 (ಕರಾವಳಿ ಟೈಮ್ಸ್) : ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ನಾಗರಿಕ ಸೇವೆಗಳ ತರಬೇತಿ ಸಂಯೋಜಿತ ಪದವಿ 2019-20 ಸಾಲಿಗೆ ಕು ಪಂಚಮಿ ಮಾರೂರು ಆಯ್ಕೆಯಾಗಿರುತ್ತಾರೆ.
ಈ ಯೋಜನೆಯಡಿ ಬಿ.ಕಾಂ ಪದವಿ ಕೋರ್ಸ್‍ಗಳೊಂದಿಗೆ ಯು.ಪಿ.ಎಸ್.ಇ. (ಐಎಎಸ್), ಕೆ.ಪಿ.ಎಸ್.ಇ. (ಕೆಎಎಸ್) ಕೋಚಿಂಗ್ ಒಳಗೊಂಡಂತೆ (ಇಂಟಿಗ್ರೆಟೆಡ್ ಡಿಗ್ರಿ ವಿತ್ ಯುಪಿಎಸ್‍ಇ, ಕೆಪಿಎಸ್‍ಇ ಕೋಚಿಂಗ್) ಉಚಿತ ಊಟ, ವಸತಿ ಮತ್ತಿತರ ಮೂಲಭೂತ ಸೌಲಭ್ಯಗಳು ದೊರಕಲಿದೆ. ಇವರು ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‍ಗೆ ದಾಖಲಾತಿ ಪಡೆದಿರುತ್ತಾರೆ. ಪ್ರತಿಭೆಯ ಆಧಾರದ ಮೇಲೆ ಆಯ್ಕೆಗೊಂಡ 50 ವಿದ್ಯಾರ್ಥಿಗಳ ಪೈಕಿ ಪಂಚಮಿ ಮಾರೂರು ಒಬ್ಬರಾಗಿರುತ್ತಾರೆ. ಇವರು ಮೂಡುಬಿದಿರೆಯ ಮಾರೂರು ನಿವಾಸಿ ಪಾರ್ಶ್ವನಾಥ-ದೀಪಶ್ರೀ ದಂಪತಿಗಳ ಪುತ್ರಿ.
0 comments:
Post a Comment