ಧರ್ಮರಾಯಸ್ವಾಮೀ ದೇವಸ್ಥಾನಕ್ಕೆ ಸೇರಿದ ಜಮೀನಿನ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಿಎಂಗೆ ಮನವಿ - Karavali Times ಧರ್ಮರಾಯಸ್ವಾಮೀ ದೇವಸ್ಥಾನಕ್ಕೆ ಸೇರಿದ ಜಮೀನಿನ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಿಎಂಗೆ ಮನವಿ - Karavali Times

728x90

18 September 2020

ಧರ್ಮರಾಯಸ್ವಾಮೀ ದೇವಸ್ಥಾನಕ್ಕೆ ಸೇರಿದ ಜಮೀನಿನ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಿಎಂಗೆ ಮನವಿ



ಬೆಂಗಳೂರು, ಸೆಪ್ಟೆಂಬರ್ 17, 2020 (ಕರಾವಳಿ ಟೈಮ್ಸ್) : ನಗರದ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೆ ನಂಬ್ರ 79 ರಲ್ಲಿನ 15 ಎಕ್ರೆ 12 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ದೇವಾಲಯದ ವಶಕ್ಕೆ ನೀಡುವಂತೆ ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘದ ಅಧ್ಯಕ್ಷ ಜಯರಾಜ್, ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಹಾಗೂ ನಿವೃತ್ತ ಎಸಿಪಿ ಸುಬಣ್ಣ ಹಾಗೂ ಹೂಡಿ ವಿಜಯಕುಮಾರ್ ಅವರನ್ನೊಳಗೊಂಡ ನಿಯೋಗ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನೀಲಸಂದ್ರ ಗ್ರಾಮದ ಸರ್ವೆ ನಂಬ್ರ 79 ರ 15 ಎಕ್ರೆ 12 ಗುಂಟೆ ಜಮೀನು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಇನಾಂ ಜಮೀನಾಗಿದೆ. ಇದರಲ್ಲಿ 6 ಎಕ್ರೆ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಇದರ ವಿರುದ್ದ ಹೈ ಕೋರ್ಟಿನಲ್ಲಿ ದಾವೆ ದಾಖಲಿಸಲಾಗಿರುತ್ತದೆ. ಉಳಿದ 9 ಎಕ್ರೆ ಜಮೀನು ಖಾಲಿ ಇದ್ದು ಆ ಜಾಗವನ್ನು ದೇವಾಲಯದ ವಶಕ್ಕೆ ನೀಡಬೇಕು ಮತ್ತು ಅದರ ಸುತ್ತ ತಂತಿ ಬೇಲಿಯನ್ನು ಹಾಕಿಸಬೇಕು ಎಂದು ಸುಪ್ರೀಂ ಕೋರ್ಟ್ 2015 ರಲ್ಲಿ ಆದೇಶ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು 9 ಎಕ್ರೆ ಜಮೀನನ್ನು ಪೂರ್ಣವಾಗಿ ಖಾಲಿ ಮಾಡಿಸಿ ದೇವಾಲಯದ ವಶಕ್ಕೆ ನೀಡಿದ್ದರು. ಆದರೆ, ಈಗ ಖಾಲಿ ಇದ್ದಂತಹ ಜಾಗದಲ್ಲಿ ಸುಮಾರು 40 ರಿಂದ 50 ಕ್ಕೂ ಹೆಚ್ಚು ಮನೆಗಳನ್ನು ಕಟ್ಟಲಾಗಿದೆ. ಈ ಜಮೀನಿನಲ್ಲಿ ಕಟ್ಟಲಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಅವರು ಸಿಎಂಗೆ ಮಾಡಿದ್ದಾರೆ. 

ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಸೊತ್ತಾಗಿರುವ ಸದರಿ ಜಮೀನಿನಲ್ಲಿ ಕಟ್ಟಿರುವಂತಹ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ನಿಯೋಗ ಎಚ್ಚರಿಸಿದೆ. ತಿಗಳ ಸಮಾಜಕ್ಕೆ ರಾಜಕೀಯ ಕ್ಷೇತ್ರದಲ್ಲಿ ಆದ್ಯತೆಯನ್ನು ಹಾಗೂ ಒಳ ಮೀಸಲಾತಿಯನ್ನು ಕಲ್ಪಿಸುವಂತೆಯೂ ಇದೇ ವೇಳೆ ನಿಯೋಗ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದೆ. ನಿಯೋಗದಲ್ಲಿ ವರ್ತೂರು ಶ್ರೀಧರ್, ಹರಿನಾಥ್, ಮಂಜುನಾಥ್, ಎಂ ನಾಗರಾಜ್, ನಂದೀಶ್ ಮೊದಲಾದವರು ಇದ್ದರು. 










  • Blogger Comments
  • Facebook Comments

0 comments:

Post a Comment

Item Reviewed: ಧರ್ಮರಾಯಸ್ವಾಮೀ ದೇವಸ್ಥಾನಕ್ಕೆ ಸೇರಿದ ಜಮೀನಿನ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಿಎಂಗೆ ಮನವಿ Rating: 5 Reviewed By: karavali Times
Scroll to Top