ಅಫ್ಘಾನ್ ಅಂಪೈರ್ ಬಾಂಬ್‌ ದಾಳಿಗೆ ಬಲಿ - Karavali Times ಅಫ್ಘಾನ್ ಅಂಪೈರ್ ಬಾಂಬ್‌ ದಾಳಿಗೆ ಬಲಿ - Karavali Times

728x90

3 October 2020

ಅಫ್ಘಾನ್ ಅಂಪೈರ್ ಬಾಂಬ್‌ ದಾಳಿಗೆ ಬಲಿ

 


ಕಾಬೂಲ್‌, ಅ. 04, 2020 (ಕರಾವಳಿ ಟೈಮ್ಸ್) : ಅಫ್ಘಾನಿಸ್ತಾನದ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಖಾನ್ ಶೆನ್ಸಾರಿ (36) ಅವರು ಶನಿವಾರ ಮಧ್ಯಾಹ್ನ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

 ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್‌ ಬಿಸ್ಮಿಲ್ಲಾ ಶೆನ್ಸಾರಿ 2018-19 ರಲ್ಲಿ 6 ಏಕದಿನ ಮತ್ತು 6 ಟಿ 20 ಪಂದ್ಯಕ್ಕೆ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು.


 ನಂಗರ್‌ಹಾರ್ ಪ್ರಾಂತ್ಯದಲ್ಲಿರುವ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಆತ್ಮಹುತಿ ಬಾಂಬ್‌ ದಾಳಿಯಲ್ಲಿ ಶೆನ್ಸಾರಿ ಸೇರಿ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ನಂಗರ್ರ್‌ಹಾರ್‌ ಗವರ್ನರ್ ವಕ್ತಾರರು ಕೆಲ ಬಂದೂಕುಧಾರಿ ವ್ಯಕ್ತಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್‌ ಪ್ರವೇಶಿಸಲು ಬಯಸಿದ್ದರು, ಆದರೆ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಅಫ್ಘಾನ್ ಅಂಪೈರ್ ಬಾಂಬ್‌ ದಾಳಿಗೆ ಬಲಿ Rating: 5 Reviewed By: karavali Times
Scroll to Top