ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು : ಒಂದೇ ವಾರದಲ್ಲಿ 2.35 ಕೋಟಿ ರೂಪಾಯಿ ಫೈನ್ ಸಂಗ್ರಹ - Karavali Times ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು : ಒಂದೇ ವಾರದಲ್ಲಿ 2.35 ಕೋಟಿ ರೂಪಾಯಿ ಫೈನ್ ಸಂಗ್ರಹ - Karavali Times

728x90

3 October 2020

ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು : ಒಂದೇ ವಾರದಲ್ಲಿ 2.35 ಕೋಟಿ ರೂಪಾಯಿ ಫೈನ್ ಸಂಗ್ರಹಬೆಂಗಳೂರು, ಅಕ್ಟೋಬರ್ 3, 2020 (ಕರಾವಳಿ ಟೈಮ್ಸ್) : ಬೆಂಗಳೂರು ನಗರ ಸಂಚಾರ ಪೆÇಲೀಸರು ಸೆಪ್ಟಂಬರ್ 20 ರಿಂದ 26ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 55,717 ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬರೋಬ್ಬರಿ 2,35,33,100/- ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಬಳಿಕ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿದ್ದರಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಯದ್ವಾತದ್ವ ದ್ವಿಚಕ್ರ ವಾಹನ ಚಾಲನೆಯ 108 ಪ್ರಕರಣದಲ್ಲಿ 66,000/- ರೂಪಾಯಿ ದಂಡ, ಅತಿ ವೇಗದ 17 ಪ್ರಕರಣದಲ್ಲಿ 5,100/- ರೂಪಾಯಿ., ಕುಡಿದು ವಾಹನ ಚಾಲನೆಯ 4 ಪ್ರಕರಣ, ಡಿಸ್ ಪ್ಲೇ ಇಲ್ಲದೆ ಚಾಲನೆ 2, ಎಲ್ಲೆಂದರಲ್ಲಿ ಪಾರ್ಕಿಂಗ್ 2398 ಪ್ರಕರಣದಲ್ಲಿ 7,08,200/- ರೂಪಾಯಿ, ಡಿಎಲ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ 394 ಪ್ರಕರಣದಲ್ಲಿ 2,11,000/- ರೂಪಾಯಿ, ಲೈನ್ ಶಿಸ್ತುಪಾಲಿಸದ 480 ಪ್ರಕರಣದಲ್ಲಿ 1,96,900/- ರೂಪಾಯಿ, ಸಮವಸ್ತ್ರ ಧರಿಸದ 273 ಪ್ರಕರಣದಲ್ಲಿ 1,24,600/- ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಗರದಲ್ಲಿ 47 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಮಾಲೀಕನಿಂದ ಸಂಚಾರಿ ಪೆÇಲೀಸರು ಬರೋಬ್ಬರಿ 23,000/- ರೂಪಾಯಿ ದಂಡ ವಸೂಲಿ ಮಾಡಿದ ಪ್ರಕರಣವೂ ನಡೆದಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು : ಒಂದೇ ವಾರದಲ್ಲಿ 2.35 ಕೋಟಿ ರೂಪಾಯಿ ಫೈನ್ ಸಂಗ್ರಹ Rating: 5 Reviewed By: karavali Times
Scroll to Top