ರಾಜ್ಯಾದ್ಯಂತ ನಾಳೆಯಿಂದ ಕಡ್ಡಾಯವಲ್ಲದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ತರಗತಿ ಪ್ರಾರಂಭ - Karavali Times ರಾಜ್ಯಾದ್ಯಂತ ನಾಳೆಯಿಂದ ಕಡ್ಡಾಯವಲ್ಲದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ತರಗತಿ ಪ್ರಾರಂಭ - Karavali Times

728x90

15 November 2020

ರಾಜ್ಯಾದ್ಯಂತ ನಾಳೆಯಿಂದ ಕಡ್ಡಾಯವಲ್ಲದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ತರಗತಿ ಪ್ರಾರಂಭಬೆಂಗಳೂರು, ನ. 16, 2020 (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಕಾರಣದಿಂದ ಕಳೆದ ಏಳೆಂಟು ತಿಂಗಳುಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದ ಪದವಿ ತರಗತಿಗಳು ನಾಳೆಯಿಂದ (ನ 17) ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪೆÇ್ಲೀಮಾ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಮಂಗಳವಾರದಿಂದ ಕೋವಿಡ್ ಮಾರ್ಗಸೂಚಿ ಪಾಲಿಸಿ ಆರಂಭಿಸಲಾಗುತ್ತಿದೆ. 

ಶಿಕ್ಷಣ ಇಲಾಖೆಯ ಕಠಿಣ ಮಾರ್ಗಸೂಚಿ ಪಾಲಿಸಿಕೊಂಡು ಕಾಲೇಜ ತರಗತಿ ಆರಂಭಿಸಲು ಸರಕಾರ ಅನುಮತಿಸಿದ ಪ್ರಕಾರ ತರಗತಿಗಳು ಪ್ರಾರಂಭವಾಗಲಿದೆ.  ವಿದ್ಯಾರ್ಥಿಗಳಿಗೆ ಕಾಲೇಜು ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತರಗತಿಗೆ ಕಡ್ಡಾಯವಾಗಿ ಬರುವಂತೆ ಒತ್ತಡ ಹೇರುವಂತಿಲ್ಲ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೆÇೀಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಲೇಬೇಕು. ಕಾಲೇಜಿಗೆ ಹಾಜರಾಗುವ 3 ದಿನಗಳ ಮುಂಚಿತವಾಗಿ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕೂಡ ಕೊರೊನಾ ಪರೀಕ್ಷೆ ಮಾಡಿಸಲೇಬೇಕು. ಕೊರೊನಾ ಪರೀಕ್ಷಾ ವರದಿ ಕಾಲೇಜಿಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಕಾಲೇಜು ಕ್ಯಾಂಪಸ್‍ಗಳಲ್ಲಿ ನಿತ್ಯ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯ, ಕ್ಯಾಂಪಸ್‍ಗಳಲ್ಲಿ ಕ್ಯಾಂಟೀನ್, ಗ್ರಂಥಾಲಯ ತೆರೆಯುವಂತಿಲ್ಲ. ಕಾಲೇಜಿನ ಕ್ಯಾಂಪಸ್, ಪ್ರತಿ ಕೊಠಡಿ ಸ್ಯಾನಿಟೈಸ್ ಮಾಡಿಸಬೇಕು. ಆನ್‍ಲೈನ್, ಆಫ್‍ಲೈನ್ ಎರಡೂ ಮಾದರಿಯಲ್ಲಿ ತರಗತಿ ನಡೆಸಬೇಕು.

ಕಾಲೇಜ್‍ಗೆ ಬರಲು ಆಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಮುಂದುವರಿಸಬೇಕು. ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೆ ಪಾಳಿ (ಶೀಫ್ಟ್) ವ್ಯವಸ್ಥೆಯಲ್ಲಿ ತರಗತಿ ನಡೆಸಬೇಕು. ವಿದ್ಯಾರ್ಥಿಗಳು ಮನೆಯಿಂದಲೇ ಊಟ, ಕುಡಿಯುವ ನೀರನ್ನು ತರಬೇಕು. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿ ನೀಡಬೇಕು. ಹಾಸ್ಟೆಲ್‍ಗಳಲ್ಲಿ ಉಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಡಬೇಕು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಪ್ರತಿ ಕಾಲೇಜಿನಲ್ಲಿ ಕೊವಿಡ್ ಕಾರ್ಯಪಡೆ ನೇಮಕ ಮಾಡಬೇಕು. ಅದರಂತೆ ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲಿ ಕೋವಿಡ್‍ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಕೋವಿಡ್ ಕಾರ್ಯಪಡೆ ಗಮನಕ್ಕೆ ತರಬೇಕು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್‍ಸಿಸಿ, ಎನ್‍ಎಸ್‍ಎಸ್ ಚಟುವಟಿಕೆ ಪ್ರಾರಂಭಿಸುವಂತಿಲ್ಲ. ಆರೋಗ್ಯ ಸೇತು ಆಪ್‍ನ್ನು ಮೊಬೈಲ್‍ನಲ್ಲಿ ಇನ್‍ಸ್ಟಾಲ್ ಮಾಡಿಸಬೇಕು. ಸಂದರ್ಶಕರು, ಸಾರ್ವಜನಿಕರಿಗೆ ಕಾಲೇಜು ಕ್ಯಾಂಪಸ್ ಪ್ರವೇಶ ನಿಷೇಧ ಮಾಡಬೇಕು. ವಿದ್ಯಾರ್ಥಿಗಳ ಟೆಲಿ ಕೌನ್ಸೆಲಿಂಗ್‍ಗಾಗಿ ಹೆಲ್ಪ್ ಲೈನ್ 84454440632 ಬಳಸಿಕೊಳ್ಳಬೇಕು. ಇವೇ ಮೊದಲಾದ ಕಠಿಣ ಮಾರ್ಗಸೂಚಿ ಪಾಲಿಸಿಕೊಂಡು ಕಾಲೇಜು ತರಗತಿ ಪ್ರಾರಂಭಿಸಲು ಸೂಚಿಸಲಾಗಿದೆ.   • Blogger Comments
  • Facebook Comments

0 comments:

Post a Comment

Item Reviewed: ರಾಜ್ಯಾದ್ಯಂತ ನಾಳೆಯಿಂದ ಕಡ್ಡಾಯವಲ್ಲದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ತರಗತಿ ಪ್ರಾರಂಭ Rating: 5 Reviewed By: karavali Times
Scroll to Top