ಬಂಟ್ವಾಳ, ನ. 20, 2020 (ಕರಾವಳಿ ಟೈಮ್ಸ್) : ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಬಂಟ್ವಾಳ ತಾಲೂಕು ಆರೋಗ್ಯ ಇಲಾಖಾ ವತಿಯಿಂದ ಬಿ ಸಿ ರೋಡಿನ ಎಸ್ ಜಿ ಎಸ್ ಆರ್ ವೈ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಕಾರ್ಯಕ್ರಮ ಉದ್ಘಾಟಿಸಿದರು. ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಶಿಶು ಅಭಿವೃದ್ದಿ ಇಲಾಖಾಧಿಕಾರಿಗಳಾದ ಗಾಯತ್ರಿ ಬಾಯಿ, ಸುಧಾ ಜೋಷಿ ಮೊದಲಾದವರು ಭಾಗವಹಿಸಿದ್ದರು. ವೈದ್ಯಾಧಿಕಾರಿ ಡಾ ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಇದೇ ವೇಳೆ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾಪ್ರಭು ಸ್ವಾಗತಿಸಿ, ಕುಸುಮ ವಂದಿಸಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment