ಅಯೋಧ್ಯೆ, ಡಿ 17, 2020 (ಕರಾವಳಿ ಟೈಮ್ಸ್) : ಅಯೋಧ್ಯೆಯಲ್ಲಿ ಹೊಡೆದುರುಳಿಸಲ್ಪಟ್ಟ ಬಾಬರಿ ಮಸೀದಿಗೆ ಪರ್ಯಾಯವಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲ ನಕ್ಷೆ ಸಿದ್ಧವಾಗುತ್ತಿದೆ. ಡಿ 19 ರಂದು ಶನಿವಾರ ಈ ನಕ್ಷೆ ಅನಾವರಣಗೊಳ್ಳಲಿದ್ದು, ಮುಂದಿನ ಜನರಿ ತಿಂಗಳ 26 ರ ಗಣರಾಜ್ಯೋತ್ಸವದ ದಿನ ಮಸೀದಿ ನಿರ್ಮಾಣದ ಶಂಕುಸ್ಥಾಪನೆ ನಡೆಯಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ.
ಬಾಬರಿ ಮಸೀದಿಗೆ ಬದಲಾಗಿ ನಿರ್ಮಾಣಗೊಳ್ಳಲಿರುವ ನೂತನ ಮಸೀದಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನು ಮೀಸಲಿಡಲಾಗಿದ್ದು, 7 ದಶಕಗಳ ಹಿಂದೆ ಜಾರಿಗೆ ಬಂದ ಭಾರತದ ಸಂವಿಧಾನದ ದಿನವೇ ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಸಂವಿಧಾನ ಬಹುತ್ವವನ್ನು ಆಧಾರವಾಗಿಟ್ಟುಕೊಂಡಿರುವ ಹಿನ್ನಲೆಯಲ್ಲಿ ಅದೇ ದಿನ ಮಸೀದಿಗೆ ಶಂಕು ಸ್ಥಾಪನೆ ನೆರವೇರಲಿದೆ ಎಂದು ಇಂಡೊ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅತರ್ ಹುಸೇನ್ ತಿಳಿಸಿದ್ದಾರೆ.
ಬಾಬರಿ ಮಸೀದಿಗೆ ಪರ್ಯಾಯವಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ 6 ತಿಂಗಳ ಹಿಂದೆ ಸುನ್ನಿ ವಕ್ಪ್ ಬೋರ್ಡ್ ಐಐಸಿಎಫ್ ಸ್ಥಾಪಿಸಲಾಗಿತ್ತು. ಮಸೀದಿ ಸಂಕೀರ್ಣ ನಿರ್ಮಾಣಕ್ಕೆ ಸಿದ್ದವಾಗಿರುವ ನೀಲನಕ್ಷೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ, ಲೈಬ್ರೆರಿ ಮೊದಲಾದವು ಒಳಗೊಂಡಿದೆ. ಮಸೀದಿಯೊಳಗೆ ಒಂದು ಬಾರಿಗೆ 2 ಸಾವಿರ ಮಂದಿ ಸೇರುವ ಸಾಮರ್ಥ್ಯವಿದ್ದು, ದುಂಡಗಿನ ಆಕಾರದಲ್ಲಿ ಮಸೀದಿಯ ರಚನೆಯಿರುತ್ತದೆ ಎಂದು ಮುಖ್ಯ ವಾಸ್ತುಶಿಲ್ಪಿ ಪೆÇ್ರ. ಎಸ್ ಎಂ ಅಖ್ತರ್ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಸ್ಥಳದಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ಸುನ್ನಿ ವಕ್ಫ್ ಮಂಡಳಿಗೆ ಕಟ್ಟಡ ನಿರ್ಮಾಣ ಮಾಡಲು ಪರ್ಯಾಯವಾಗಿ ಐದು ಎಕರೆ ಜಾಗವನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಉತ್ತರ ಪ್ರದೇಶದ ಪಟ್ಟಣದ ಪ್ರಮುಖ ಸ್ಥಳದಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರಕಾರ 5 ಎಕರೆ ಜಮೀನನ್ನು ಅಯೋಧ್ಯೆಯ ಸೊಹವಲ್ ತೆಹ್ಸಿಲ್‍ನ ದನ್ನಿಪುರ್ ಗ್ರಾಮದಲ್ಲಿ ನೀಡಿತ್ತು.
ಹೊಸ ಮಸೀದಿ ಬಾಬರಿ ಮಸೀದಿಗಿಂತ ದೊಡ್ಡದಾಗಿರುತ್ತದೆ. 1,400 ವರ್ಷಗಳ ಹಿಂದೆ ಪ್ರವಾದಿ ತನ್ನ ಕೊನೆಯ ಧರ್ಮೋಪದೇಶದಲ್ಲಿ ಬೋಧಿಸಿದಂತೆ ಇದು ಇಸ್ಲಾಂ ಧರ್ಮದ ನಿಜವಾದ ಉತ್ಸಾಹದಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸಲಿದೆ ಎಂದು ಅಖ್ತರ್ ಹೇಳಿದರು.
ಪುರಾತನ ರಾಮ ದೇವಾಲಯ ಇರುವ ಜಾಗದಲ್ಲಿ ಅದನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಕರ ಸೇವಕರು 1992ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರು.
0 comments:
Post a Comment