ಬರೋಬ್ಬರಿ 58 ವರ್ಷಗಳ ನಂತರ ನಾಗ್ಪುರ ಪದವೀಧರ ಕ್ಷೇತ್ರ ‘ಕೈ’ ವಶಕ್ಕೆ - Karavali Times ಬರೋಬ್ಬರಿ 58 ವರ್ಷಗಳ ನಂತರ ನಾಗ್ಪುರ ಪದವೀಧರ ಕ್ಷೇತ್ರ ‘ಕೈ’ ವಶಕ್ಕೆ - Karavali Times

728x90

4 December 2020

ಬರೋಬ್ಬರಿ 58 ವರ್ಷಗಳ ನಂತರ ನಾಗ್ಪುರ ಪದವೀಧರ ಕ್ಷೇತ್ರ ‘ಕೈ’ ವಶಕ್ಕೆ

 


   
ನಾಗ್ಪುರ, ಡಿ. 05, 2020 (ಕರಾವಳಿ ಟೈಮ್ಸ್) : ಮಹಾರಾಷ್ಟ್ರ ವಿಧಾನ ಪರಿಷತ್ ನಾಗ್ಪುರ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಅವರು ಬಿಜೆಪಿ ಅಭ್ಯರ್ಥಿ ಸಂದೀಪ್ ಜೋಶಿ ವಿರುದ್ಧ 18,910 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

    ಕಳೆದ ಐದೂವರೆ ದಶಕಗಳಿಗೂ ಅಧಿಕ ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ನಾಗ್ಪುರದಲ್ಲಿ ಈ ಬಾರಿ ಕೈ ಅಭ್ಯರ್ಥಿ ಮೇಲುಗೈ ಸಾಧಿಸಿದ್ದು, ಆರೆಸ್ಸೆಸ್ ಕೇಂದ್ರ ಎಂದೇ ಬಿಂಬಿತವಾಗಿದ್ದ ನಾಗ್ಪುರದಲ್ಲೇ ಸೋಲಾಗಿರುವುದು ಕೇಸರಿ ಪಾಳಯ ಭಾರೀ ಮುಖಭಂಗ ಅನುಭವಿಸಿದೆ.

        ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಹಿಂದೆ ಹಲವು ಬಾರಿ ನಾಗ್ಪುರ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಪ್ರಸ್ತುತ ನಾಗ್ಪುರ ನಗರದ ಮೇಯರ್ ಆಗಿರುವ ಜೋಶಿ ಮತ್ತು ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿ ವಂಜಾರಿ ಅವರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ವಂಜಾರಿ ಗೆಲುವು ಸಾಧಿಸಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಬರೋಬ್ಬರಿ 58 ವರ್ಷಗಳ ನಂತರ ನಾಗ್ಪುರ ಪದವೀಧರ ಕ್ಷೇತ್ರ ‘ಕೈ’ ವಶಕ್ಕೆ Rating: 5 Reviewed By: karavali Times
Scroll to Top