ವೇಗದ 12 ಸಹಸ್ರ ಒಂಡೇ ರನ್ : ಸಚಿನ್ ದಾಖಲೆ ಮುರಿದು ಹಾಕಿದ ಕೊಹ್ಲಿ - Karavali Times ವೇಗದ 12 ಸಹಸ್ರ ಒಂಡೇ ರನ್ : ಸಚಿನ್ ದಾಖಲೆ ಮುರಿದು ಹಾಕಿದ ಕೊಹ್ಲಿ - Karavali Times

728x90

1 December 2020

ವೇಗದ 12 ಸಹಸ್ರ ಒಂಡೇ ರನ್ : ಸಚಿನ್ ದಾಖಲೆ ಮುರಿದು ಹಾಕಿದ ಕೊಹ್ಲಿಕ್ಯಾನ್ಬೆರಾ, ಡಿ. 02, 2020 (ಕರಾವಳಿ ಟೈಮ್ಸ್) : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ದ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 23 ರನ್ ಭಾರಿಸುವ ವೇಳೆಗೆ ವೇಗವಾಗಿ 12 ಸಾವಿರ ರನ್‍ಗಳ ಗಡಿ ದಾಟುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಏಕದಿನ ಕ್ರಿಕೆಟ್‍ನಲ್ಲಿ ಇದುವರೆಗೆ ವೇಗವಾಗಿ 12 ಸಾವಿರ ರನ್‍ಗಳ ಗಡಿ ದಾಟಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನಲ್ಲಿದ್ದರು. ಅದನ್ನೀಗ ಕೊಹ್ಲಿ ಮುರಿದು ಹಾಕುವ ಮೂಲಕ ಅಗ್ರಸ್ತಾನಕ್ಕೇರಿದ್ದಾರೆ. 

ಸಚಿನ್ 300 ಇನ್ನಿಂಗ್ಸ್‍ಗಳಲ್ಲಿ 12 ಸಾವಿರ ಏಕದಿನ ರನ್ ಗಳಿಸಿದರೆ ಕೊಹ್ಲಿ 251 ಪಂದ್ಯಗಳ 242 ಇನ್ನಿಂಗ್ಸ್‍ಗಳಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ. 

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಮತ್ತು ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್‍ಗಳಲ್ಲಿ 12 ಸಾವಿರ ರನ್‍ಗಳ ಗಡಿ ದಾಟಿದ್ದರು.

ಇದಕ್ಕೂ ಮೊದಲು ಸಚಿನ್ ಅವರ ವೇಗದ 10 ಸಾವಿರ ರನ್ ಪೂರೈಸಿದ ದಾಖಲೆಯನ್ನು ಬ್ರೇಕ್ ಮಾಡಿದ್ದ ಕೊಹ್ಲಿ, ಕೇವಲ 205 ಇನ್ನಿಂಗ್ಸ್‍ಗಳಲ್ಲಿ 10 ಸಾವಿರ ರನ್ ಬಾರಿಸಿದ್ದರು. ಸಚಿನ್ 10 ಸಾವಿರ ರನ್ ಹೊಡೆಯಲು 259 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ್ದ ಕೊಹ್ಲಿ ವೇಗವಾಗಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 22 ಸಾವಿರ ರನ್ ಹೊಡೆದ ಆಟಗಾರ ಎಂಬ ಸಾಧನೆ ಮಾಡಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ವೇಗದ 12 ಸಹಸ್ರ ಒಂಡೇ ರನ್ : ಸಚಿನ್ ದಾಖಲೆ ಮುರಿದು ಹಾಕಿದ ಕೊಹ್ಲಿ Rating: 5 Reviewed By: karavali Times
Scroll to Top