ಕಂಬಳ ಕ್ರೀಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು : ಡಿಸಿಎಂ ಸವದಿ - Karavali Times ಕಂಬಳ ಕ್ರೀಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು : ಡಿಸಿಎಂ ಸವದಿ - Karavali Times

728x90

31 January 2021

ಕಂಬಳ ಕ್ರೀಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು : ಡಿಸಿಎಂ ಸವದಿ

ಬಂಟ್ವಾಳ, ಜ. 31, 2021 (ಕರಾವಳಿ ಟೈಮ್ಸ್) : ಕಂಬಳ ಎಂಬುದು ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು, ರೈತ ಸಮುದಾಯ ಈ ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ನಿರಂತರವಾಗಿ ಜೀವನದ ಜಂಜಾಟದಲ್ಲೇ ತೊಡಗಿಸಿಕೊಳ್ಳುವ ರೈತ ಸಮುದಾಯ ಭಾಗವಹಿಸುವ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಕೋವಿಡ್ ಹಾಗೂ ಲಾಕ್‍ಡೌನ್ ಬಳಿಕ ಜಿಲ್ಲೆಯ ಪ್ರಥಮ ಕಂಬಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡದಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೊಕ್ಕಾಡಿಗೋಳಿ ಕಂಬಳಕ್ಕೆ ವೈಯಕ್ತಿಕ ನೆಲೆಯಲ್ಲಿ 11 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದರಲ್ಲದೆ ಮುಖ್ಯಮಂತ್ರಿ ಜೊತೆ ಮಾತನಾಡಿ ಜಿಲ್ಲೆಯಲ್ಲಿ ನಡೆಯುವ ಮುಂದಿನ ಕಂಬಳಕ್ಕೆ ಸರಕಾರದಿಂದಲೂ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಈ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಕೂಟ ನಡೆದಿದ್ದು, ಕೋಣದ ಜೊತೆ ಓಡುವುದು ಅಸಾಮಾನ್ಯ ಸಾಧನೆಯಾಗಿದ್ದು, ಅಂತರ್ ರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಮಾನ ಓಟಗಾರರು ಕಂಬಳ ಕ್ಷೇತ್ರದಲ್ಲಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷ ನೀಡಿದೆ ಎಂದ ಡಿಸಿಎಂ ಜಿಲ್ಲೆಯಲ್ಲಿ ಮೂಲನಂಬಿಕೆ ಮತ್ತು ಸಾಂಪ್ರದಾಯಿಕವಾಗಿ ನಡೆಯುವ ಕಂಬಳಕ್ಕೆ ಸಮಯದ ಮಿತಿ ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಮಾತುಕತೆ ನಡೆಸಿ ರಾತ್ರಿಯಿಡೀ ಕಂಬಳ ನಡೆಸಲು ಸೂಚಿಸುವುದಾಗಿ ಇದೇ ವೇಳೆ ತಿಳಿಸಿದರು. ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಕಂಬಳ ಉದ್ಘಾಟಿಸಿದರು, ಕಂಬಳ ಸಮಿತಿ ಅಧ್ಯಕ್ಷ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಸೊರಬ ಶಾಸಕ, ಚಿತ್ರನಟ ಕುಮಾರ್ ಬಂಗಾರಪ್ಪ, ಶಾಸಕರಾದ ರಾಜೇಶ್ ನಾಯ್ಕ್, ಹರೀಶ್ ಪೂಂಜ, ಮಾಜಿ ಸಚಿವರಾದ ಬಿ ರಮಾನಾಥ ರೈ, ಬಿ ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಕೆ ಹರಿಕೃಷ್ಣ ಬಂಟ್ವಾಳ್, ಜಿ ಪಂ ಸದಸ್ಯರುಗಳಾದ ಎಂ ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ಬಿ ದೇವದಾಸ್ ಶೆಟ್ಟಿ, ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಜಿ ಕೆ ಭಟ್, ಶಶಿಕಾಂತ್ ಸವದಿ, ಧೀರಜ್ ಎಂ ಪ್ರಸಾದ್, ಸ್ಥಳೀಯ ವೈದ್ಯ ಡಾ ಸುದೀಪ್ ಕುಮಾರ್ ಜೈನ್, ಎಪಿಎಂಸಿ ಮಾಜಿ ನಿರ್ದೇಶಕ ರತ್ನಕುಮಾರ್ ಚೌಟ, ಹೊಸಂಗಡಿ ತಾ ಪಂ ಸದಸ್ಯ ಓಬಯ, ಆರಂಬೋಡಿ ಗ್ರಾ ಪಂ ಅಧ್ಯಕ್ಷ ಪ್ರಭಾಕರ ಹುಲಿಮೇರು, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ನ್ಯಾಯವಾದಿ ಸುರೇಶ ಶೆಟ್ಟಿ, ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ಪೆÇಡುಂಬ, ಕಾರ್ಯದರ್ಶಿ ಪುಷ್ಪರಾಜ ಜೈನ್, ಕೋಶಾಧಿಕಾರಿ ಎಚ್ ಹರೀಶ ಹಿಂಗಾಣಿ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂಚಾಲಕರಾದ ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ಧನ ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಸ್ಥಳದಾನಿಗಳಾದ ಸುಧೀರ್ ಶೆಟ್ಟಿ, ಸುಧಾಕರ ಚೌಟ ಬಾವ, ಗುಮ್ಮಣ್ಣ ಶೆಟ್ಟಿ, ಪ್ರವೀಣ ಕುಲಾಲ್, ಹರೀಶ ಶೆಟ್ಟಿ, ಸುಂದರ ಪೂಜಾರಿ, ಪ್ರಚಾರ ಸಮಿತಿ ಸಂಚಾಲಕ, ಪತ್ರಕರ್ತ ಮೋಹನ್ ಕೆ ಶ್ರೀಯಾನ್ ರಾಯಿ ಮೊದಲಾದವರು ಇದೇ ವೇಳೆ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಓಟಗಾರ ಶ್ರೀನಿವಾಸ ಗೌಡ, ಸುರೇಶ್ ಎಂ ಶೆಟ್ಟಿ, ಪ್ರವೀಣ್ ಕೋಟ್ಯಾನ್ ಅವರನ್ನು ಸಚಿವರು ಸನ್ಮಾನಿಸಿದರು. ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ತೀರ್ಪುಗಾರ ಗುಣಪಾಲ ಕಡಂಬ ವಂದಿಸಿದರು. ಕೂಟದಲ್ಲಿ ಕನೆಹಲಗೆ 4 ಜೊತೆ, ಅಡ್ಡಹಲಗೆ 7 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 26 ಜೊತೆ, ಹಗ್ಗ ಕಿರಿಯ 18 ಜೊತೆ, ನೇಗಿಲು ಕಿರಿಯ 97 ಜೊತೆ ಸಹಿತ ಒಟ್ಟು 167 ಜೋಡಿ ಓಟದ ಕೋಣಗಳು ಭಾಗವಹಿಸಿದ್ದವು. ಫಲಿತಾಂಶ ಕನೆಹಲಗೆ ವಿಭಾಗದಲ್ಲಿ ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ ಪ್ರಥಮ (ಹಲಗೆ ಮುಟ್ಟಿದವರು : ಬೈಂದೂರು ಭಾಸ್ಕರ ದೇವಾಡಿಗ ಇವರು 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ.), ಬೇಲಾಡಿ ಬಾವ ಅಶೋಕ್ ಶೆಟ್ಟಿ ದ್ವಿತೀಯ (ಹಲಗೆ ಮುಟ್ಟಿದವರು : ನಾರಾವಿ ಯುವರಾಜ್ ಜೈನ್ ಇವರು 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ.) ಅಡ್ಡ ಹಲಗೆ ವಿಭಾಗದಲ್ಲಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ಪ್ರಥಮ, (ಹಲಗೆ ಮುಟ್ಟಿದವರು : ಮಂದಾರ್ತಿ ಶಿರೂರು ಗೋಪಾಲ ಕೃಷ್ಣ ನಾಯ್ಕ್), ಆಲದಪದವು ಮೇಗಿನ ಮನೆ ಸುಭ್ರತ್ ಶೆಟ್ಟಿ ದ್ವಿತೀಯ (ಹಲಗೆ ಮುಟ್ಟಿದವರು : ಬಂಗಾಡಿ ಕುದ್ಮನ್ ಲೋಕಯ್ಯ ಗೌಡ್ರು), ಹಗ್ಗ ಹಿರಿಯ ವಿಭಾಗದಲ್ಲಿ ರಾಯಿ ಶೀತಾಲ ರೂಪ ರಾಜೇಶ್ ಶೆಟ್ಟಿ ಪ್ರಥಮ (ಓಡಿಸಿದವರು : ಬೈಂದೂರು ವಿವೇಕ್), ಕೂಳೂರು ಪೆÇಯ್ಯೆಲು ಪಿ ಆರ್ ಶೆಟ್ಟಿ ದ್ವಿತೀಯ (ಓಡಿಸಿದವರು : ಬಾರಾಡಿ ಸತೀಶ್), ಹಗ್ಗ ಕಿರಿಯ ವಿಭಾಗದಲ್ಲಿ ಚೊಕ್ಕಾಡಿ ಕಟಪಾಡಿ ದೇವಿಕ್ ಸಂತೋಷ್ ಶೆಟ್ಟಿ ಪ್ರಥಮ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ), ಸಿದ್ಧಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ ದ್ವಿತೀಯ (ಓಡಿಸಿದವರು : ವಾಲ್ಪಾಡಿ ಶಂಕರ್) ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾನಿಲ ಬಾಡ ಪೂಜಾರಿ ಪ್ರಥಮ (ಓಡಿಸಿದವರು : ಬೈಂದೂರು ವಿವೇಕ್), ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ ದ್ವಿತೀಯ (ಓಡಿಸಿದವರು : ಬಾರಾಡಿ ಸತೀಶ್) ನೇಗಿಲು ಕಿರಿಯ ವಿಭಾಗದಲ್ಲಿ ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್ ಪ್ರಥಮ (ಓಡಿಸಿದವರು : ಮರೋಡಿ ಶೀಧರ್), ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ದ್ವಿತೀಯ (ಓಡಿಸಿದವರು : ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್)
  • Blogger Comments
  • Facebook Comments

0 comments:

Post a Comment

Item Reviewed: ಕಂಬಳ ಕ್ರೀಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು : ಡಿಸಿಎಂ ಸವದಿ Rating: 5 Reviewed By: karavali Times
Scroll to Top