ಬಿಜೆಪಿಯಿಂದ ಗ್ರಾ ಪಂ ಸದಸ್ಯರಿಗೆ ಅಭಿನಂದಿಸಲು ಜ.11 ರಿಂದ ಜ.13 ರವರೆಗೆ ರಾಜ್ಯಾದ್ಯಂತ ಜನಸೇವಕ್ ಸಮಾವೇಶ - Karavali Times ಬಿಜೆಪಿಯಿಂದ ಗ್ರಾ ಪಂ ಸದಸ್ಯರಿಗೆ ಅಭಿನಂದಿಸಲು ಜ.11 ರಿಂದ ಜ.13 ರವರೆಗೆ ರಾಜ್ಯಾದ್ಯಂತ ಜನಸೇವಕ್ ಸಮಾವೇಶ - Karavali Times

728x90

9 January 2021

ಬಿಜೆಪಿಯಿಂದ ಗ್ರಾ ಪಂ ಸದಸ್ಯರಿಗೆ ಅಭಿನಂದಿಸಲು ಜ.11 ರಿಂದ ಜ.13 ರವರೆಗೆ ರಾಜ್ಯಾದ್ಯಂತ ಜನಸೇವಕ್ ಸಮಾವೇಶ

ಕಲಬುರಗಿ, ಜ. 09, 2021 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿರುವ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಿಜೆಪಿ ಪಕ್ಷದ ವತಿಯಿಂದ ಜನವರಿ 11 ರಿಂದ 13 ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಸೇವಕ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಒಟ್ಟು ಐದು ತಂಡಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜ.11 ರಿಂದ 13 ರವರೆಗೆ ಸಮಾವೇಶ ನಡೆಯಲಿದ್ದು, ಗ್ರಾ ಪಂ ಸದಸ್ಯರು ಮುಂದಿನ ದಿನಗಳಲ್ಲಿ ಯಾವ ರೀತಿ ಜನ ಸೇವೆ ಮಾಡಬೇಕೆಂಬುದರ ಬಗ್ಗೆ ಜಾಗೃತಿ ಮೂಡಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದವರು ಹೇಳಿದರು. ಜ.11 ರಂದು ಮೈಸೂರಿನಲ್ಲಿ ಮೊದಲ ಸಮಾವೇಶ ಆರಂಭವಾಗಲಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ ಕುಮಾರ್ ಕಟೀಲ್, ಆ ಭಾಗದ ಸಂಸದರು, ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರು, ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು. ರಾಜ್ಯದ ಎಲ್ಲ ಕಡೆಯೂ ಈ ಜನಸೇವಕ್ ಸಮಾವೇಶಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಹಾಗೂ ಶ್ರೀರಾಮುಲು ನೇತೃತ್ವದಲ್ಲಿ 5 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಯಿಂದ ಗ್ರಾ ಪಂ ಸದಸ್ಯರಿಗೆ ಅಭಿನಂದಿಸಲು ಜ.11 ರಿಂದ ಜ.13 ರವರೆಗೆ ರಾಜ್ಯಾದ್ಯಂತ ಜನಸೇವಕ್ ಸಮಾವೇಶ Rating: 5 Reviewed By: karavali Times
Scroll to Top