ಕಡಬ, ಜ. 24, 2021 (ಕರಾವಳಿ ಟೈಮ್ಸ್) : ಭಾರತೀಯ ಜೈನ್ ಮಿಲನ್ ವಲಯ-8, ಇಜಿಲಂಪಾಡಿ ಶಾಖೆಯ ವತಿಯಿಂದ ಬಹುಮುಖ ಪ್ರತಿಭೆ, ಯುವ ಸಾಹಿತಿ, ರಾಜ್ಯ-ಅಂತರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಿಲನ್ ಸದಸ್ಯ, ಹೊಸಂಗಡಿ ಬಸದಿ ಸಮ್ಯಕ್ತ್ ಜೈನ್ ಅವರನ್ನು ಮಿಲನ್ನ ಯುವ ಪ್ರತಿಭೆ ಗೌರವ ಪ್ರದಾನ ಮಾಡಿ ಪುರಸ್ಕರಿಸಲಾಯಿತು.
ಇಜಿಲಂಪಾಡಿ ಬೀಡು ಶುಭಾಕರ ಹೆಗ್ಗಡೆ ಸವರ ಪ್ರಾಯೋಜಕತ್ವದಲ್ಲಿ ನಡೆದ ವಲಯದ ಮಾಸಿಕ ಸಭೆಯಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಭಾರತೀಯ ಜೈನ್ ಮಿಲನ್ ವಲಯ-8 ಮಂಗಳೂರು ವಿಭಾಗದ ನಿರ್ದೇಶಕ ರಾಜವರ್ಮ ಆರಿಗ, ಇಚಿಲಂಪಾಡಿ ಜೈನ್ ಮಿಲನ್ ಅಧ್ಯಕ್ಷ ಮಹಾವೀರ್ ಜೈನ್, ಕಾರ್ಯದರ್ಶಿ ಸುರಭಿ ಜಯಕುಮಾರ್, ಸ್ಥಾಪಕಾಧ್ಯಕ್ಷ ರವಿರಾಜ್ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಸಮ್ಯಕ್ತ್ ಜೈನ್ ಅವರು ಕಡಬ ತಾಲೂಕು, ನೂಜಿಬಾಳ್ತಿಲ ನಿವಾಸಿ ಧರಣೇಂದ್ರ ಇಂದ್ರ-ಮಂಜುಳಾ ದಂಪತಿಯ ಪುತ್ರರಾಗಿದ್ದಾರೆ.
23 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment