ಪಾಣೆಮಂಗಳೂರು ರಸ್ತೆ ಅಪಘಾತ : ಪಾದಚಾರಿ ವ್ಯಕ್ತಿ ಮೃತ - Karavali Times ಪಾಣೆಮಂಗಳೂರು ರಸ್ತೆ ಅಪಘಾತ : ಪಾದಚಾರಿ ವ್ಯಕ್ತಿ ಮೃತ - Karavali Times

728x90

29 January 2021

ಪಾಣೆಮಂಗಳೂರು ರಸ್ತೆ ಅಪಘಾತ : ಪಾದಚಾರಿ ವ್ಯಕ್ತಿ ಮೃತ

ಬಂಟ್ವಾಳ, ಜ. 29, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರಿನಲ್ಲಿ ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಇಲ್ಲಿಗೆ ಸಮೀಪದ ಶಂಭೂರು ನಿವಾಸಿ ಸಂಜೀವ (71) ಅವರು ಮೃತಪಟ್ಟಿದ್ದಾರೆ. ರಸ್ತೆ ದಾಟಲು ನಿಂತಿದ್ದ ವೇಳೆ ವೇಗವಾಗಿ ಬಂದ ಇಕೋ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಸಂಜೀವ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ರಸ್ತೆ ಅಪಘಾತ : ಪಾದಚಾರಿ ವ್ಯಕ್ತಿ ಮೃತ Rating: 5 Reviewed By: karavali Times
Scroll to Top