ಬಿ..ಸಿ.ರೋಡು ಠಾಣಾ ಸಮೀಪದಲ್ಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೊನೆಗೂ ಬೇಧಿಸಿದ ಪೊಲೀಸರು - Karavali Times ಬಿ..ಸಿ.ರೋಡು ಠಾಣಾ ಸಮೀಪದಲ್ಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೊನೆಗೂ ಬೇಧಿಸಿದ ಪೊಲೀಸರು - Karavali Times

728x90

17 January 2021

ಬಿ..ಸಿ.ರೋಡು ಠಾಣಾ ಸಮೀಪದಲ್ಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೊನೆಗೂ ಬೇಧಿಸಿದ ಪೊಲೀಸರು

ಬಂಟ್ವಾಳ, ಜ. 17, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ಕೂಗಳತೆಯ ದೂರದ ತುಂಬಿದ ಸಂಕೀರ್ಣದಲ್ಲಿ ಕಳೆದ ಕೆಲ ಸಮಯಗಳಿಂದ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯನ್ನು ಭಾನುವಾರ ಕೊನೆಗೂ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್ಸೈ ಅವಿನಾಶ್ ಹಾಗೂ ಡಿಸಿಐಬಿ ಪೊಲೀಸರು ಭಾನುವಾರ ಬೆಳಿಗ್ಗೆ ಈ ಜಂಟಿ ಕಾರ್ಯಾಚರಣೆ ನಡೆಸಿದ್ದು, ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯ ಮುಂಭಾಗದ ಭಾರತ್ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದ ತಳ ಭಾಗದಲ್ಲಿ ವಾಸ್ತವ್ಯಕ್ಕೆಂದು ಬಾಡಿಗೆ ಪಡೆದುಕೊಂಡಿದ್ದ ಕೊಠಡಿಯಲ್ಲಿ ರಾತ್ರಿ ಹಗಲು ವೇಶ್ಯಾವಾಟಿಕೆ ಕೃತ್ಯ ನಡೆಯುತ್ತಿತ್ತು ಎನ್ನಲಾಗಿದೆ. ದಾಳಿ ವೇಳೆ ಪೊಲೀಸರು ವೈಶ್ಯಾವಾಟಿಕೆ ಕೃತ್ಯದಲ್ಲಿ ಭಾಗಿಯಾಗಿದ್ದರೆನ್ನಲಾದ ಐವರು ಮಹಿಳೆಯರ ಸಹಿತ ಪುರುಷ ಆರೋಪಿಗಳಾದ ಪುತ್ತೂರು ತಾಲೂಕಿನ ನೆಕ್ಕಿಲಾಡಿ ನಿವಾಸಿ ಶರಣ್‌ (28), ಚಿಕ್ಕಮುಡ್ನೂರು ನಿವಾಸಿ ಕಿರಣ್ (25) ಹಾಗೂ ಬಂಟ್ವಾಳ ತಾಲೂಕು ಕರಿಯಂಗಳ ನಿವಾಸಿ ಭರತ್ (28) ಅವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ 4,400/- ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಿ..ಸಿ.ರೋಡು ಠಾಣಾ ಸಮೀಪದಲ್ಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೊನೆಗೂ ಬೇಧಿಸಿದ ಪೊಲೀಸರು Rating: 5 Reviewed By: karavali Times
Scroll to Top