ಉಳ್ಳಾಲದಲ್ಲಿ ಮತ್ತೆ ಸಾಮೂಹಿಕವಾಗಿ ಕಾಣಿಸಿಕೊಂಡ ಕೊರೋನಾ ಪಾಸಿಟಿವ್ : ಖಾಸಗಿ ನರ್ಸಿಂಗ್ ಕಾಲೇಜು ಸೀಲ್‍ಡೌನ್ - Karavali Times ಉಳ್ಳಾಲದಲ್ಲಿ ಮತ್ತೆ ಸಾಮೂಹಿಕವಾಗಿ ಕಾಣಿಸಿಕೊಂಡ ಕೊರೋನಾ ಪಾಸಿಟಿವ್ : ಖಾಸಗಿ ನರ್ಸಿಂಗ್ ಕಾಲೇಜು ಸೀಲ್‍ಡೌನ್ - Karavali Times

728x90

3 February 2021

ಉಳ್ಳಾಲದಲ್ಲಿ ಮತ್ತೆ ಸಾಮೂಹಿಕವಾಗಿ ಕಾಣಿಸಿಕೊಂಡ ಕೊರೋನಾ ಪಾಸಿಟಿವ್ : ಖಾಸಗಿ ನರ್ಸಿಂಗ್ ಕಾಲೇಜು ಸೀಲ್‍ಡೌನ್

ಮಂಗಳೂರು, ಫೆ. 03, 2021 (ಕರಾವಳಿ ಟೈಮ್ಸ್) : ಮಂಗಳೂರು ಸಮೀಪದ ಉಳ್ಳಾಲದ ಖಾಸಗಿ ನರ್ಸಿಂಗ್ ಕಾಲೇಜಿನ ಸುಮಾರು 40ರಷ್ಟು ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಕಾಲೇಜು ಹಾಗೂ ಹಾಸ್ಟೆಲನ್ನು ಫೆ 19ರವರೆಗೆ ಸೀಲ್‍ಡೌನ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದು ಜನ ನಿಟ್ಟುಸಿರುವ ಬಿಟ್ಟಿದ್ದರು. ಈ ಹಿನ್ನಲೆಯಲ್ಲಿ ಶಾಲಾ-ಕಾಲೇಜು ಸಹಿತ ಹಾಸ್ಟೆಲ್‍ಗಳನ್ನು ಕೂಡಾ ತೆರಯಲಾಗಿತ್ತು. ಇದೀಗ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಕಾಲೇಜು ಪ್ರಾರಂಭದ ನಂತರ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಪರೀಕ್ಷೆ ವೇಳೆ ಸುಮಾರು ನಲ್ವತ್ತರಷ್ಟು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ಕಂಡುಬಂದ ಎಲ್ಲ ವಿದ್ಯಾರ್ಥಿಗಳನ್ನು ಸದ್ಯ ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ಕಾಲೇಜು ಹಾಗೂ ವಿದ್ಯಾರ್ಥಿಗಳು ವಾಸವಿದ್ದ ಹಾಸ್ಟೆಲನ್ನು ಕೂಡಾ ಸೀಲ್‍ಡೌನ್ ಮಾಡಲಾಗಿದೆ. ಉಳ್ಳಾಲ ನಗರಸಭಾ ಕಮಿಷನರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲದಲ್ಲಿ ಮತ್ತೆ ಸಾಮೂಹಿಕವಾಗಿ ಕಾಣಿಸಿಕೊಂಡ ಕೊರೋನಾ ಪಾಸಿಟಿವ್ : ಖಾಸಗಿ ನರ್ಸಿಂಗ್ ಕಾಲೇಜು ಸೀಲ್‍ಡೌನ್ Rating: 5 Reviewed By: karavali Times
Scroll to Top