ಫೆಬ್ರವರಿ 15 (ನಾಳೆ) ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ : ಡಿಜಿಟಲ್ ಪಾವತಿ ಮಾಡದ ವಾಹನಗಳಿಗೆ ಡಬಲ್ ಫೀಸ್ - Karavali Times ಫೆಬ್ರವರಿ 15 (ನಾಳೆ) ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ : ಡಿಜಿಟಲ್ ಪಾವತಿ ಮಾಡದ ವಾಹನಗಳಿಗೆ ಡಬಲ್ ಫೀಸ್ - Karavali Times

728x90

14 February 2021

ಫೆಬ್ರವರಿ 15 (ನಾಳೆ) ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ : ಡಿಜಿಟಲ್ ಪಾವತಿ ಮಾಡದ ವಾಹನಗಳಿಗೆ ಡಬಲ್ ಫೀಸ್

ನವದೆಹಲಿ, ಫೆ. 14, 2021 (ಕರಾವಳಿ ಟೈಮ್ಸ್) : ಫಾಸ್ಟ್ ಟ್ಯಾಗ್ ಅಳವಡಿಕೆಗೆ ವಿಸ್ತರಿಸಲಾಗಿದ್ದ ಅಂತಿಮ ದಿನಾಂಕ ನಾಳೆಗೆ ಮುಕ್ತಾಯಗೊಳ್ಳಲಿದ್ದು, ಫೆಬ್ರವರಿ 15 ರಿಂದ (ನಾಳೆಯಿಂದ) ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಫಾಸ್ಟ್ ಟ್ಯಾಗ್ ಇಲ್ಲದೆ ಟೋಲ್ ಪ್ಲಾಝಾ ಮೂಲಕ ಸಂಚರಿಸುವ ವಾಹನ ಚಾಲಕರು ದುಪ್ಪಟ್ಟು ಶುಲ್ಕ ತೆರಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಮಾಹಿತಿ ನೀಡಿದ್ದು, ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಅಳವಡಿಸದೇ ಟೋಲ್ ಪ್ಲಾಝಾಗೆ ಬಂದರೆ ಅಂತಹ ವಾಹನಗಳು ಎರಡು ಪಟ್ಟು ಹಣ ನೀಡಿಬೇಕಾಗುತ್ತದೆ ಎಂದು ಹೇಳಿದೆ. ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ವಾಹನ ಚಾಲಕರ ಮನವಿ ಮೇರೆಗೆ ನಂತರ ಫಾಸ್ಟ್ ಟ್ಯಾಗ್ ಅಳವಡಿಕೆಯ ಅಂತಿಮ ಗಡುವನ್ನು ಫೆಬ್ರವರಿ 15 ರವರೆಗೂ ವಿಸ್ತರಿಸಲಾಗಿತ್ತು. ಈ ಪ್ರಕಾರ ಕೇಂದ್ರ ಸರಕಾರರದ ಅಂತಿಮ ಗಡುವು ಸೋಮವಾರಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಸೋಮವಾರದಿಂದ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿರಲಿದೆ. ವಾಹನ ಸವಾರರು ದೇಶಾದ್ಯಂತ ಟೋಲ್ ಪ್ಲಾಝಾಗಳಲ್ಲಿ ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿಸಬೇಕಾಗಿದೆ. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ಶುಲ್ಕ ಪಾವತಿಸಬೇಕು. ಈ ಮಧ್ಯೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇನ್ನು ಯಾವುದೇ ಕಾರಣಕ್ಕೂ ಫಾಸ್ಟ್ ಟ್ಯಾಗ್ ಅಂತಿಮ ದಿನಾಂಕ ವಿಸ್ತರಿಸಲಾಗುವುದಿಲ್ಲ ಎಂದಿದ್ದಾರೆ. ಫಾಸ್ಟ್ ಟ್ಯಾಗ್ ಅನುಷ್ಠಾನಕ್ಕೆ ನೀಡಲಾಗಿರುವ ಅಂತಿಮ ಗಡುವಿನ ವಿಸ್ತರಣೆ ಸಾಧ್ಯವಿಲ್ಲ. ವಾಹನ ಮಾಲೀಕರು ಕೂಡಲೇ ಇ-ಪಾವತಿ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕು. ಟೋಲ್ ಪ್ಲಾಝಾಗಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕ ಪಾವತಿಸಲು ಅನುಕೂಲವಾಗುವ ಫಾಸ್ಟ್ ಟ್ಯಾಗ್‍ಗಳನ್ನು 2016ರಲ್ಲೇ ಪರಿಚಯಿಸಲಾಗಿದೆ. ಟ್ಯಾಗ್‍ಗಳನ್ನು ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಝಾಗಗಳ ಮೂಲಕ ವಾಹನಗಳು ಮನಬಂದಂತೆ ಸಂಚರಿಸುವುದು ತಪ್ಪುತ್ತದೆ. ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗಿದೆ ಎಂದವರು ಹೇಳಿದ್ದಾರೆ. ಈಗಾಗಲೇ ಶೇ. 90ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿವೆ. ಶೇ. 10ರಷ್ಟು ವಾಹನಗಳು ಮಾತ್ರ ಅಳವಡಿಸಿಕೊಳ್ಳಬೇಕಿದೆ. ಎಲ್ಲ ಟೋಲ್ ಪ್ಲಾಝಾಗಳಲ್ಲೂ ಫಾಸ್ಟ್ ಟ್ಯಾಗ್ ಅಳವಡಿಕೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 15 (ನಾಳೆ) ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ : ಡಿಜಿಟಲ್ ಪಾವತಿ ಮಾಡದ ವಾಹನಗಳಿಗೆ ಡಬಲ್ ಫೀಸ್ Rating: 5 Reviewed By: karavali Times
Scroll to Top