ರೂಪಾಂತರಿ ಕೊರೋನಾ ಆತಂಕ : ಕೇರಳ-ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳ ಹೊರತು ಬಾಕಿ ಎಲ್ಲಾ ಗಡಿಗಳು ಕ್ಲೋಸ್ - Karavali Times ರೂಪಾಂತರಿ ಕೊರೋನಾ ಆತಂಕ : ಕೇರಳ-ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳ ಹೊರತು ಬಾಕಿ ಎಲ್ಲಾ ಗಡಿಗಳು ಕ್ಲೋಸ್ - Karavali Times

728x90

22 February 2021

ರೂಪಾಂತರಿ ಕೊರೋನಾ ಆತಂಕ : ಕೇರಳ-ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳ ಹೊರತು ಬಾಕಿ ಎಲ್ಲಾ ಗಡಿಗಳು ಕ್ಲೋಸ್

ಮಂಗಳೂರು, ಫೆ. 22, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯದಲ್ಲಿ ರೂಪಾಂತರಿ ಕೊರೋನಾ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳ-ದಕ್ಷಿಣ ಕನ್ನಡ ಪ್ರಯಾಣಿಕರ ಸಂಚಾರಕ್ಕೆ 5 ಚೆಕ್ ಪೆÇೀಸ್ಟ್ ಮೂಲಕ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಬಾಕಿ ಉಳಿದ ಎಲ್ಲಾ ಗಡಿ ರಸ್ತೆಗಳ ಸಂಚಾರ ಸ್ಥಗಿತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಸೋಮವಾರ (ಫೆ. 22) ದಿಂದಲೇ ಈ ಆದೇಶ ಜಾರಿಗೆ ಬರಲಿದೆ. ಕೇರಳ-ದಕ್ಷಿಣ ಕನ್ನಡ ನಡುವೆ ಸಂಚಾರಕ್ಕೆ 14 ಕ್ಕೂ ಹೆಚ್ಚು ಗಡಿ ರಸ್ತೆಗಳಿವೆ. ಸೋಮವಾರದಿಂದ ಮಂಗಳೂರು ತಾಲೂಕಿನ ತಲಪಾಡಿ, ಬಂಟ್ವಾಳ ತಾಲೂಕಿನ ಸಾರಡ್ಕ, ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು, ಮೇಣಾಲ, ಸುಳ್ಯ ತಾಲೂಕಿನ ಜಾಲ್ಸೂರು ರಸ್ತೆಗಳಲ್ಲಿ ಮಾತ್ರ ಉಭಯ ರಾಜ್ಯಗಳ ಪ್ರಯಾಣಿಕರು ಸಂಚರಿಸಬೇಕು. ಬೇರೆಲ್ಲಾ ಗಡಿ ರಸ್ತೆಗಳು ಬಂದ್ ಆಗಲಿವೆ. ಐದು ಚೆಕ್ ಪೆÇೀಸ್ಟ್‍ಗಳಲ್ಲಿ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಹಾಗೂ ಸ್ಕ್ರೀನಿಂಗ್ ನಡೆಸಲು ಆರೋಗ್ಯ ಇಲಾಖೆಯ ತಂಡಗಳು ಕಾರ್ಯೋನ್ಮುಖವಾಗಿವೆ. ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರೂ 72 ಗಂಟೆಯೊಳಗೆ ನಡೆಸಲಾದ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಇದನ್ನು ಪರಿಶೀಲಿಸಿದ ನಂತರವೇ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರ್ಯಾಂಡಮ್ ಪರೀಕ್ಷಾ ವರದಿ ನೀಡಿ ಗಡಿ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ತಾಲೂಕುವಾರು ಗುರುತಿಸಿದ ಚೆಕ್ ಪೆÇೀಸ್ಟ್‍ಗಳಲ್ಲಿ ಅಯಾ ತಾಲೂಕಿನ ತಹಶೀಲ್ದಾರರು ತಪಾಸಣೆ ಹಾಗೂ ಸ್ಕ್ರೀನಿಂಗ್ ನಡೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗಳನ್ನು ಶಿಫ್ಟ್ ಮಾದರಿಯಲ್ಲಿ ನಿಯೋಜಿಸಿ ವರದಿ ನೀಡಬೇಕು. ಪೆÇಲೀಸ್ ಇಲಾಖೆಯಿಂದ ಮೂರು ಪಾಳಿಯಲ್ಲಿ ತಲಾ ಎರಡು ಸಿಬ್ಬಂದಿ ತಂಡವನ್ನು ನಿಯೋಜಿಸಿ ವರದಿ ನೀಡಬೇಕು ಎಂದು ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ರೂಪಾಂತರಿ ಕೊರೋನಾ ಆತಂಕ : ಕೇರಳ-ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳ ಹೊರತು ಬಾಕಿ ಎಲ್ಲಾ ಗಡಿಗಳು ಕ್ಲೋಸ್ Rating: 5 Reviewed By: karavali Times
Scroll to Top