ಬಿ.ಸಿ.ರೋಡು ರಿಕ್ರಿಯೇಶನ್ ಕ್ಲಬ್ಬಿಗೆ ಪೊಲೀಸ್ ದಾಳಿ : ಹಲವರು ವಶಕ್ಕೆ, ಕೆಲವರು ಪರಾರಿ - Karavali Times ಬಿ.ಸಿ.ರೋಡು ರಿಕ್ರಿಯೇಶನ್ ಕ್ಲಬ್ಬಿಗೆ ಪೊಲೀಸ್ ದಾಳಿ : ಹಲವರು ವಶಕ್ಕೆ, ಕೆಲವರು ಪರಾರಿ - Karavali Times

728x90

13 March 2021

ಬಿ.ಸಿ.ರೋಡು ರಿಕ್ರಿಯೇಶನ್ ಕ್ಲಬ್ಬಿಗೆ ಪೊಲೀಸ್ ದಾಳಿ : ಹಲವರು ವಶಕ್ಕೆ, ಕೆಲವರು ಪರಾರಿಬಂಟ್ವಾಳ, ಮಾ. 14, 2021 (ಕರಾವಳಿ ಟೈಮ್ಸ್) : ಬಿ ಸಿ ರೋಡು ಪೇಟೆಯ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕೂಗಳತೆಯ ಅಂತರದಲ್ಲಿ ನಡೆಯುತ್ತಿದ್ದ ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ  ಇಸ್ಪೀಟ್ ಅಡ್ಡೆಗೆ ಶನಿವಾರ ಸಂಜೆ ಬಂಟ್ವಾಳ ನಗರ ಠಾಣಾ ನೂತನ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವರಾಜು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 


    ದಾಳಿ ವೇಳೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಸುಮಾರು ನೂರರಷ್ಟು ಮಂದಿ ಕಕ್ಕಾಬಿಕ್ಕಿಯಾಗಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಮಂದಿ ಸಿಕ್ಕಿದಲ್ಲಿಗೆ ಓಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ವಶಕ್ಕೆ ಪಡೆದುಕೊಂಡವರನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಕೂಡಾ ಕೃತ್ಯದಲ್ಲಿ ಪಾಲ್ಗೊಂಡವರು ಹಾಗೂ ಕ್ಲಬ್ ಮಾಲಕರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ರಾತ್ರಿವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ಪೊಲೀಸರು ಬಿಟ್ಟುಕೊಟ್ಟಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ರಿಕ್ರಿಯೇಶನ್ ಕ್ಲಬ್ಬಿಗೆ ಪೊಲೀಸ್ ದಾಳಿ : ಹಲವರು ವಶಕ್ಕೆ, ಕೆಲವರು ಪರಾರಿ Rating: 5 Reviewed By: karavali Times
Scroll to Top