ಬಂಟ್ವಾಳ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಲ್ಲಮಜಲು ನಿವಾಸಿ, ಆದಿ ದ್ರಾವಿಡ ಸಮಾಜದ ನಾಯಕ ರಾಜಾ ಪಲ್ಲಮಜಲು (53) ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಜಕೀಯ ಮುಖಂಡರೂ ಆಗಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಅವರು ಪ್ರತಿವರ್ಷ ಜಾತಿ-ಧರ್ಮ ಬೇಧ ಮರೆತು ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದು ಬಂಟ್ವಾಳದಲ್ಲಿ ಜನಾನುರಾಗಿಯಾಗಿದ್ದರು. ವೃತ್ತಿಯಲ್ಲಿ ಉದ್ಯಮಿಯಾಗಿರುವ ಇವರು ಇತ್ತೀಚೆಗೆ ಸಿದ್ದಕಟ್ಟೆ-ರಾಯಿಯಲ್ಲಿ ರಾಜರಾಣಿ ಫರ್ನಿಚರ್ ಹಾಗೂ ಸಿದ್ದ ಉಡುಪುಗಳ ಮಳಿಗೆ ಸ್ಥಾಪಿಸಿದ್ದರು. ಮೃತರು ಪತ್ನಿ, 4 ಮಂದಿ ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment