ಶ್ರೀನಿವಾಸ ಸಾಲ್ಯಾನ್ ರಚಿತ ಕುಂಭೋಧರಿ ದೇವಿ ಮಹಾತ್ಮೆ ಯಕ್ಷಗಾನ ಮುಹೂರ್ತ - Karavali Times ಶ್ರೀನಿವಾಸ ಸಾಲ್ಯಾನ್ ರಚಿತ ಕುಂಭೋಧರಿ ದೇವಿ ಮಹಾತ್ಮೆ ಯಕ್ಷಗಾನ ಮುಹೂರ್ತ - Karavali Times

728x90

13 April 2021

ಶ್ರೀನಿವಾಸ ಸಾಲ್ಯಾನ್ ರಚಿತ ಕುಂಭೋಧರಿ ದೇವಿ ಮಹಾತ್ಮೆ ಯಕ್ಷಗಾನ ಮುಹೂರ್ತ

ಬಂಟ್ವಾಳ, ಎಪ್ರಿಲ್ 13, 2021 (ಕರಾವಳಿ ಟೈಮ್ಸ್) : ಮುಮ್ಮೇಳದಲ್ಲಿ ಕುಲಾಲ ಸಮುದಾಯದ ಕಲಾವಿದರನ್ನೊಳಗೊಂಡ ಕಂಭೋದರಿ ಯಕ್ಷ ತಂಡದ ನೂತನ ಯಕ್ಷಗಾನ ಪ್ರಸಂಗ ಶ್ರೀನಿವಾಸ ಸಾಲ್ಯಾನ್ ವಿರಚಿತ “ಕುಂಭೋದರಿ ದೇವಿ ಮಹಾತ್ಮೆ” ಮಹೂರ್ತ ಕಾರ್ಯ ಬಿ.ಸಿ.ರೋಡಿನ ಕುಲಾಲ ಮಠದ ಶ್ರೀ ಕುಂಭೋದರಿ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು. 

ಈ ಸಂದರ್ಭ ಬಂಟ್ವಾಳದ ಕುಂಭೋದರಿ ಕಲಾ ತಂಡದ ಸದಸ್ಯರಾದ ನಾರಾಯಣ ಸಿ. ಪೆರ್ನೆ, ಯಾದವ ಕುಲಾಲ್ ಅಗ್ರಬೈಲು, ಸುಕುಮಾರ್ ಬಂಟ್ವಾಳ, ಕುಂಭೋದರಿ ದೇವಸ್ಥಾನದ ಅರ್ಚಕ ಮೋಹನ್ ಕುರ್ನಾಡು, ದೇವಸ್ಥಾನದ ಹಿರಿಯರಾದ ಚಂದಪ್ಪ ದೇವಂದಬೆಟ್ಟು, ಕ್ಷೇತ್ರದ ಸಹಾಯಕ ಮಧುರಾಜ್ ಕಾಮಾಜೆ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಶ್ರೀನಿವಾಸ ಸಾಲ್ಯಾನ್ ರಚಿತ ಕುಂಭೋಧರಿ ದೇವಿ ಮಹಾತ್ಮೆ ಯಕ್ಷಗಾನ ಮುಹೂರ್ತ Rating: 5 Reviewed By: karavali Times
Scroll to Top