ಸುನಾಮಿಯಾಗಿ ಪರಿಣಮಿಸಿದ ಕೀರನ್ ಪೆÇಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಕೊಚ್ಚಿ ಹೋದ ಧೋನಿ ಪಡೆ - Karavali Times ಸುನಾಮಿಯಾಗಿ ಪರಿಣಮಿಸಿದ ಕೀರನ್ ಪೆÇಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಕೊಚ್ಚಿ ಹೋದ ಧೋನಿ ಪಡೆ - Karavali Times

728x90

1 May 2021

ಸುನಾಮಿಯಾಗಿ ಪರಿಣಮಿಸಿದ ಕೀರನ್ ಪೆÇಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಕೊಚ್ಚಿ ಹೋದ ಧೋನಿ ಪಡೆ


ನವದೆಹಲಿ, ಮೇ 02, 2021 (ಕರಾವಳಿ ಟೈಮ್ಸ್) : ಏಕಾಏಕಿ ಸುನಾಮಿಯಂತೆ ಅಬ್ಬರಿಸಿದ ದೈತ್ಯ ಬ್ಯಾಟ್ಸ್‍ಮೆನ್ ಕೀರನ್ ಪೊಲಾರ್ಡ್ ಅವರು ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ಶನಿವಾರ ರಾತ್ರಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ಚೆನ್ನೈ ನಿಗದಿಪಡಿಸಿದ ಬೃಹತ್ ಮೊತ್ತವನ್ನು ಮೆಟ್ಟಿ ನಿಂತು ಅಚ್ಚರಿದಾಯದ 4 ವಿಕೆಟ್‍ಗಳ ಜಯ ಗಳಿಸಿತು.

219 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ತಂಡದ ಇನ್ನಿಂಗ್ಸ್ ಕೊನೆಯ ಎಸೆತದವರೆಗೂ ರೋಚಕವಾಗಿ ಮುಂದುವರಿಯಿತು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪೊಲಾರ್ಡ್ ಕೊನೆಯ ಎಸೆತದಲ್ಲಿ 2 ರನ್ ಓಡುವ ಮೂಲಕ ಮುಂಬೈ ತಂಡಕ್ಕೆ ಜಯ ತಂದುಕೊಟ್ಟರು.

ಬೃಹತ್ ಮೊತ್ತವನ್ನು ಗಮನದಲ್ಲಿಟ್ಟುಕೊಂಡು ಬ್ಯಾಟ್ ಬೀಸಿದ ಪೆÇಲಾರ್ಡ್ (ಅಜೇಯ 87 ರನ್, 34 ಎಸೆತ, 6 ಬೌಂಡರಿ, 8 ಸಿಕ್ಸ್) ಅಕ್ಷರಶಃ ಬಿರುಗಾಳಿಯಾಗಿ ಪರಿಣಮಿಸಿದರು. ಪೊಲ್ಲಾರ್ಡ್ ಅಬ್ಬರಕ್ಕೆ ನಿಧಾನಗತಿಯಲ್ಲಾದರೂ ಜವಾಬ್ದಾರಿಯು ಸಾಥ್ ನೀಡಿದ ಕೃಣಾಲ್ ಪಾಂಡ್ಯ 32 ರನ್ (23 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ 16 ರನ್ (7 ಎಸೆತ, 2 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. 

ಕ್ವಿಂಟನ್ ಡಿಕಾಕ್ (38 ರನ್, 28 ಎಸೆತ, 1 ಸಿಕ್ಸ್ ಹಾಗೂ 4 ಬೌಂಡರಿ) ಹಾಗೂ ರೋಹಿತ್ ಶರ್ಮಾ (35 ರನ್, 24 ಎಸೆತ, 1 ಸಿಕ್ಸರ್, 4 ಬೌಂಡರಿ) ಉತ್ತಮ ಆರಂಭವನ್ನು ಒದಗಿಸಿದರು. 

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೇವಲ 4 ರನ್ (4 ಎಸೆತ, 1 ಬೌಂಡರಿ) ಸಿಡಿಸಿ ಔಟಾದರು. ನಂತರ ಬಂದ ಮೊಯೀನ್ ಅಲಿ (58 ರನ್, 36 ಎಸೆತ, 5 ಬೌಂಡರಿ, 5 ಸಿಕ್ಸ್) , ಫಾಫ್ ಡುಪ್ಲೆಸಿಸ್ (50 ರನ್, 28 ಎಸೆತ, 2 ಬೌಂಡರಿ, 4 ಸಿಕ್ಸರ್) ಜೋಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 2ನೇ ವಿಕೆಟ್‍ಗೆ 108 ರನ್ (61 ಎಸೆತ) ಒಟ್ಟುಗೂಡಿಸಿದರು.

11ನೇ ಓವರಿನ ಕೊನೆಯಲ್ಲಿ ಚೆನ್ನೈ 116 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕ್ರೀಸಿಗೆ ಬಂದ ಅಂಬಾಟಿ ರಾಯುಡು (72 ರನ್, 27 ಎಸೆತ, 4 ಬೌಂಡರಿ, 7 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ರಾಯುಡು ಹಾಗೂ ರವೀಂದ್ರ ಜಡೇಜಾ (22 ರನ್, 22 ಎಸೆತ, 2 ಬೌಂಡರಿ) ಜೋಡಿ 5ನೇ ವಿಕೆಟ್‍ಗೆ 56 ಎಸೆತಗಳ ಮುಂದೆ ಮುರಿಯದ 102 ರನ್‍ಗಳ ಜೊತೆಯಾಟವಾಡಿದರು. ಅಂತಿಮವಾಗಿ ಚೆನ್ನೈ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಮುಂಬೈ ಪರ ಕೀರನ್ ಪೆÇಲಾರ್ಡ್ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಬುಮ್ರಾ ತಲಾ ಒಂದು ವಿಕೆಟ್ ಕಬಳಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸುನಾಮಿಯಾಗಿ ಪರಿಣಮಿಸಿದ ಕೀರನ್ ಪೆÇಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಕೊಚ್ಚಿ ಹೋದ ಧೋನಿ ಪಡೆ Rating: 5 Reviewed By: karavali Times
Scroll to Top