ಬಂಟ್ವಾಳ, ಮೇ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಸಮೀಪದ ಬುಡೋಳಿ-ಜೋಗಿಬೆಟ್ಟು ಎಂಬಲ್ಲಿ ಸೋಮವಾರ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಬುಡೋಳಿ ನಿವಾಸಿ ಮಹಮ್ಮದ್ ಶರೀಫ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಡೋಳಿಯಿಂದ ಗಡಿಯಾರದ ಕಡೆಗೆ ಸಂಚರಿಸುತ್ತಿದ್ದ ಮಹಮ್ಮದ್ ಶರೀಫ್ ಅವರ ದ್ವಿಚಕ್ರ ವಾಹನಕ್ಕೆ ಬೆಂಗಳೂರು ಕಡೆಯಿಂದ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















0 comments:
Post a Comment