ಇಂಧನ ಹಾಗೂ ಅವಶ್ಯಕ ಸಾಮಾಗ್ರಿ ಬೆಲೆ ಏರಿಕೆ ವಿರುದ್ಧ ಎಡ ಪಕ್ಷಗಳಿಂದ 15 ದಿನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಜ್ಜು  - Karavali Times ಇಂಧನ ಹಾಗೂ ಅವಶ್ಯಕ ಸಾಮಾಗ್ರಿ ಬೆಲೆ ಏರಿಕೆ ವಿರುದ್ಧ ಎಡ ಪಕ್ಷಗಳಿಂದ 15 ದಿನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಜ್ಜು  - Karavali Times

728x90

13 June 2021

ಇಂಧನ ಹಾಗೂ ಅವಶ್ಯಕ ಸಾಮಾಗ್ರಿ ಬೆಲೆ ಏರಿಕೆ ವಿರುದ್ಧ ಎಡ ಪಕ್ಷಗಳಿಂದ 15 ದಿನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಜ್ಜು 

 ನವದೆಹಲಿ, ಜೂನ್ 14, 2021 (ಕರಾವಳಿ ಟೈಮ್ಸ್) : ಇಂಧನ ಹಾಗೂ ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆ ಏರಿಕೆ ವಿರುದ್ಧ ಎಡಪಕ್ಷಗಳು ಬುಧವಾರದಿಂದ ತಿಂಗಳಾಂತ್ಯದವರೆಗೂ 15 ದಿನಗಳ ಕಾಲ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. 

 ಸಿಪಿಐ(ಎಂ) ಸಿಪಿಐ, ಅಲ್ ಇಂಡಿಯಾ ಫಾರ್ವಡ್ ಬ್ಲಾಕ್, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಸಿಪಿಐ (ಎಲ್) ಸಹಿತ ಎಡಪಕ್ಷಗಳು ಸೇರಿ ಪ್ರತಿಭಟನೆ ನಡೆಸುವ ಬಗ್ಗೆ ಭಾನುವಾರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದೆ. 

 ಈ ಹೇಳಿಕೆ ಪ್ರಕಾರ ಜೂನ್ 16 ರಂದು ಆರಂಭವಾಗಲಿರುವ ಪ್ರತಿಭಟನೆ ಜೂನ್ 30 ರಂದು ಅಂತ್ಯವಾಗಲಿದೆ. ಹೆಚ್ಚುತ್ತಿರುವ ತೈಲ ಬೆಲೆಯನ್ನು ಇಳಿಸಬೇಕು ಹಾಗೂ ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಎಡಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿವೆ. 

 ನಿರಂತರವಾಗಿ ಹೆಚ್ಚಾಗುತ್ತಿರುವ ತೈಲ ಬೆಲೆಯಿಂದ ಜನಸಾಮಾನ್ಯರ ಬದುಕಿಗೆ ಹೊರೆಯಾಗಿದೆ. ಇತ್ತೀಚಿಗೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ 21 ಬಾರಿ ತೈಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಎಡಪಕ್ಷಗಳು ಆರೋಪಿಸಿವೆ.

 ತೈಲ ಬೆಲೆ ಏರುತ್ತಿರುವ ಸಂದರ್ಭದಲ್ಲಿ ದೇಶದ ಆರ್ಥಿಕ ಕುಸಿತಗೊಂಡಿದ್ದು, ನಿರುದ್ಯೋಗ ಹೆಚ್ಚಾಗಿದೆ, ಖರೀದಿ ಸಾಮರ್ಥ್ಯ ಕುಸಿತಗೊಂಡಿದ್ದು, ಹಸಿವಿನ ಪ್ರಮಾಣ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಎಡಪಕ್ಷಗಳು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಎಲ್ಲಾ ಕುಟುಂಬಗಳಿಗೆ  ಆರು ತಿಂಗಳವರೆಗೂ ತಿಂಗಳಿಗೆ 7,500 ರೂಪಾಯಿಗಳನ್ನು ಕೇಂದ್ರ ಸರ್ಕಾರ ಕೂಡಲೇ ನೇರ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿವೆ.

  • Blogger Comments
  • Facebook Comments

0 comments:

Post a Comment

Item Reviewed: ಇಂಧನ ಹಾಗೂ ಅವಶ್ಯಕ ಸಾಮಾಗ್ರಿ ಬೆಲೆ ಏರಿಕೆ ವಿರುದ್ಧ ಎಡ ಪಕ್ಷಗಳಿಂದ 15 ದಿನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಜ್ಜು  Rating: 5 Reviewed By: karavali Times
Scroll to Top