ಕಟ್ಟಡ ಕಾರ್ಮಿಕರ ಆಹಾರ ಕಿಟ್ ಗ್ರಾಮ ಮಟ್ಟದಲ್ಲೇ ವಿತರಿಸಲಾಗುವುದು : ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಪ್ರಕಟಣೆ - Karavali Times ಕಟ್ಟಡ ಕಾರ್ಮಿಕರ ಆಹಾರ ಕಿಟ್ ಗ್ರಾಮ ಮಟ್ಟದಲ್ಲೇ ವಿತರಿಸಲಾಗುವುದು : ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಪ್ರಕಟಣೆ - Karavali Times

728x90

7 July 2021

ಕಟ್ಟಡ ಕಾರ್ಮಿಕರ ಆಹಾರ ಕಿಟ್ ಗ್ರಾಮ ಮಟ್ಟದಲ್ಲೇ ವಿತರಿಸಲಾಗುವುದು : ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಪ್ರಕಟಣೆ

ಬಂಟ್ವಾಳ, ಜುಲೈ 07, 2021 (ಕರಾವಳಿ ಟೈಮ್ಸ್) : ನೋಂದಾಯಿತ ಕಟ್ಟಡ ಕಾರ್ಮಿಕರ ಕಿಟ್ ವಿತರಣಾ ಕಾರ್ಯಕ್ರಮ ಕಳೆದ ಕೆಲ ದಿನಗಳಿಂದ ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯುತ್ತಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 7 ಮತ್ತು 8 ರಂದು ನಿಗದಿಪಡಿಸಲಾಗಿದ್ದ ಕಿಟ್ ವಿತರಣಾ ಕಾರ್ಯಕ್ರಮ ರದ್ದುಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಗ್ರಾಮ ಮಟ್ಟದಲ್ಲೇ ವಿತರಿಸಲಾಗುವುದು ಎಂದು ಬಂಟ್ವಾಳ ಕಾರ್ಮಿಕ ಇಲಾಖೆಯ ನಿರೀಕ್ಷಕರು ತಿಳಿಸಿದ್ದಾರೆ. 

ಕೋವಿಡ್-19 ಕಾರ್ಯಸೂಚಿಯನ್ವಯ ಏಕಕಾಲದಲ್ಲಿ ಒಂದೆಡೆ ಎಲ್ಲರನ್ನು ಸೇರಿಸಿ ಆಹಾರ ಕಿಟ್ ವಿತರಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಿಯಮಿತ ಜನರನ್ನು ಕರೆದು ಆಯಾಯ ಗ್ರಾಮ ಮಟ್ಟದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆಯ ಬಂಟ್ವಾಳ ನಿರೀಕ್ಷಕಿ ಮೆರ್ಲಿನ್ ಗ್ರೇಸಿಯಾ ಡಿ’ಸೋಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

1 comments:

Item Reviewed: ಕಟ್ಟಡ ಕಾರ್ಮಿಕರ ಆಹಾರ ಕಿಟ್ ಗ್ರಾಮ ಮಟ್ಟದಲ್ಲೇ ವಿತರಿಸಲಾಗುವುದು : ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಪ್ರಕಟಣೆ Rating: 5 Reviewed By: karavali Times
Scroll to Top