ಮುಕ್ಕ ಶ್ರೀನಿವಾಸ್ ವಿವಿಯಿಂದ ಆಗಸ್ಟ್ 22, 23 ರಂದು ಅಣುಕು ಸಿಇಟಿ ಪರೀಕ್ಷೆ - Karavali Times ಮುಕ್ಕ ಶ್ರೀನಿವಾಸ್ ವಿವಿಯಿಂದ ಆಗಸ್ಟ್ 22, 23 ರಂದು ಅಣುಕು ಸಿಇಟಿ ಪರೀಕ್ಷೆ - Karavali Times

728x90

20 August 2021

ಮುಕ್ಕ ಶ್ರೀನಿವಾಸ್ ವಿವಿಯಿಂದ ಆಗಸ್ಟ್ 22, 23 ರಂದು ಅಣುಕು ಸಿಇಟಿ ಪರೀಕ್ಷೆ

ಮಂಗಳೂರು, ಆಗಸ್ಟ್ 20, 2021 (ಕರಾವಳಿ ಟೈಮ್ಸ್) : ಸಿಇಟಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸುರತ್ಕಲ್-ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ, ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆಗಸ್ಟ್ 22 ಹಾಗೂ 23 ರಂದು ಅಣುಕು ಸಿಇಟಿ ಪರೀಕ್ಷೆ ಏರ್ಪಡಿಸಲಾಗಿದೆ. ಈ ಅಣುಕು ಸಿಇಟಿ ಪರೀಕ್ಷೆಯಲ್ಲಿ ಮುಂಬವರು ಸಿಇಟಿ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ  ಕೊಡಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ ತಿಳಿಸಿದ್ದಾರೆ. 

ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಷಯಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪ್ರತಿಯೊಂದು ವಿಷಯದಲ್ಲಿ 60 ನಿಮಿಷಗಳ ಪರೀಕ್ಷೆ ನಡೆಯಲಿದೆ. ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ 11ರವರೆಗೆ ಗಣಿತಶಾಸ್ತ್ರ ಮತ್ತು ಮಧ್ಯಾಹ್ನ 2 ರಿಂದ 3 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಆಗಸ್ಟ್ 23ರಂದು ಬೆಳಗ್ಗೆ 10 ರಿಂದ 11ರವರೆಗೆ ಭೌತಶಾಸ್ತ್ರ ಪರೀಕ್ಷೆ ನಡೆಯಲಿದೆ.

ಲಾಕ್ ಡೌನ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಅಣುಕು ಪರೀಕ್ಷೆಯ ಸಹಕಾರ ಪಡೆದು ವಿದ್ಯಾರ್ಥಿಗಳು ಈ ತಿಂಗಳಾಂತ್ಯದಲ್ಲಿ ನಡೆಯುವ ಸಿಇಟಿ-2021 ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿಕಾ ಗುಣಮಟ್ಟ ಹೆಚ್ಚಿಸಿಕೊಳ್ಳುವ ಉದ್ದೇಶವೂ ಈ ಅಣುಕು ಪರೀಕ್ಷೆಯ ಹಿಂದಿದೆ ಎಂದು ಪ್ರಾಂಶುಪಾಲ ಥಾಮಸ್ ಪಿಂಟೋ ತಿಳಿಸಿದ್ದಾರೆ.

ಆನ್‍ಲೈನ್ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಚಿಸುವ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರೊ. ವಿಶ್ವಾಸ್ ಶೆಟ್ಟಿ ಅವರ ಮೊಬೈಲ್ ಸಂಖ್ಯೆ 9743289292 ಅಥವಾ ಡಾ. ಪ್ರವೀಣ್ ಬಿ ಎಂ ಅವರ ಮೊಬೈಲ್ ಸಂಖ್ಯೆ 9980951074) ಯನ್ನು ಸಂಪರ್ಕಿಸಬಹುದಾಗಿದೆ.

ಸಂಸ್ಥೆಯ ಇಮೇಲ್ ವಿಳಾಸ ಹಾಗೂ ವೆಬ್ ಸೈಟ್ ವಿಳಾಸ ಈ ರೀತಿ ಇದೆ : 

Mail ID : vishwas.cet@srinivasuniversity.edu.in

http://forms.gle/RW25vzRbNH8Ngaoh9

  • Blogger Comments
  • Facebook Comments

0 comments:

Post a Comment

Item Reviewed: ಮುಕ್ಕ ಶ್ರೀನಿವಾಸ್ ವಿವಿಯಿಂದ ಆಗಸ್ಟ್ 22, 23 ರಂದು ಅಣುಕು ಸಿಇಟಿ ಪರೀಕ್ಷೆ Rating: 5 Reviewed By: karavali Times
Scroll to Top