ಬಂಟ್ವಾಳ, ಸೆಪ್ಟೆಂಬರ್ 22 2021 (ಕರಾವಳಿ ಟೈಮ್ಸ್) : ತಾಲೂಕಿನ ಬಡ್ಡಕಟ್ಟೆ ಬಳಿ ಮಂಗಳವಾರ ದ್ಚಿಚಕ್ರ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ನಗರ ಠಾಣಾ ಪಿಎಸ್ಐ ಅವಿನಾಶ್ ನೇತೃತ್ವದ ಪೊಲೀಸರು ಮದ್ಯ, ದ್ವಿಚಕ್ರ ವಾಹನ ಸಹಿತ ಆರೋಪಿ ರಮೇಶ್ ಪೂಜಾರಿಯನ್ನು ದಸ್ತಗಿರಿ ಮಾಡಿದ್ದಾರೆ.
ಪಿಎಸ್ಐ ಅವಿನಾಶ್ ಅವರು ತಮ್ಮ ಠಾಣಾ ಸಿಬ್ಬಂದಿಗಳ ಜೊತೆ ಬಡ್ಡಕಟ್ಟೆಯಲ್ಲಿ ವಾಹನ ತಪಾಸಣೆ ವೇಳೆ ಈ ಅಕ್ರಮ ಮದ್ಯ ಸಾಗಾಟ ಬೇಧಿಸಿದ್ದು, ಆರೋಪಿಯಿಂದ ಸುಮಾರು 7,620/- ರೂಪಾಯಿ ಮೌಲ್ಯದ 90 ಲೀಟರ್ ತೂಕದ ಮೈಸೂರು ಲ್ಯಾನ್ಸರ್ ಮದ್ಯದ 58 ಪೌಚುಗಳು ಹಾಗೂ 180 ಎಂ ಎಲ್ ನ 10 ಪೌಚ್ ಓಲ್ಡ್ ಟವರ್ ವಿಸ್ಕಿ ಸಹಿತ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 111/2021 ಕಲಂ 32, 34 ಹಾಗೂ 43 (ಬಿ) ಕರ್ನಾಟಕ ಅಬಕಾರಿ ಕಾಯ್ದೆಯಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment