ಪುತ್ತೂರು : ಜಾಲತಾಣದಲ್ಲಿ ಪರಿಚಯಸ್ಥರಾಗಿ ಮುಸ್ಲಿಂ ಯುವತಿಯನ್ನು ಬೇಟಿಯಾದ ಭಿನ್ನ ಕೋಮು ಯುವಕಗೆ ತಂಡದಿಂದ ಹಲ್ಲೆ, ಬೆದರಿಕೆ - Karavali Times ಪುತ್ತೂರು : ಜಾಲತಾಣದಲ್ಲಿ ಪರಿಚಯಸ್ಥರಾಗಿ ಮುಸ್ಲಿಂ ಯುವತಿಯನ್ನು ಬೇಟಿಯಾದ ಭಿನ್ನ ಕೋಮು ಯುವಕಗೆ ತಂಡದಿಂದ ಹಲ್ಲೆ, ಬೆದರಿಕೆ - Karavali Times

728x90

1 September 2021

ಪುತ್ತೂರು : ಜಾಲತಾಣದಲ್ಲಿ ಪರಿಚಯಸ್ಥರಾಗಿ ಮುಸ್ಲಿಂ ಯುವತಿಯನ್ನು ಬೇಟಿಯಾದ ಭಿನ್ನ ಕೋಮು ಯುವಕಗೆ ತಂಡದಿಂದ ಹಲ್ಲೆ, ಬೆದರಿಕೆ

ಪುತ್ತೂರು, ಸೆಪ್ಟೆಂಬರ್ 01, 2021 (ಕರಾವಳಿ ಟೈಮ್ಸ್) : ಸಾಮಾಜಿಕ ಜಾಲತಾಣದಲ್ಲಿ ಪುತ್ತೂರಿನ ಮುಸ್ಲಿಂ ಮಹಿಳೆ ಅಮೀನಾ ಬಾನು ಎಂಬಾಕೆಯನ್ನು ಪರಿಚಯ ಮಾಡಿಕೊಂಡ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ ಗ್ರಾಮದ ಹುಲಿಗೆಯ್ಯ ಎಂಬವರ ಪುತ್ರ ಹನುಮಂತರಾಯ (19) ಎಂಬಾತ ಆಕೆಯನ್ನು ಕಂಡು ಮಾತನಾಡಿಸಲು ಆಗಸ್ಟ್ 31 ರಂದು ಪುತ್ತೂರಿಗೆ ಬಂದಿದ್ದು, ಈ ವೇಳೆ ಜಮಾಯಿಸಿದ ಸ್ಥಳೀಯ ಅಪರಿಚಿತ ಮುಸ್ಲಿಂ ಯುವಕರ ಗುಂಪು ಯುವಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹನುಮಂತರಾಯ ಸುಮಾರು 6 ತಿಂಗಳಿಂದ ಪುತ್ತೂರು ನಿವಾಸಿ ಅಮೀನ ಬಾನು ಎಂಬಾಕೆಯನ್ನು ಶೇರ್ ಚಾಟ್ ಮೂಲಕ ಪರಿಚಯವಾಗಿದ್ದು, ಬಳಿಕ ಇವರಿಬ್ಬರು ಮೊಬೈಲ್ ಮೂಲಕ ಸಂದೇಶ ಸಂಪರ್ಕ ಸಾಧಿಸಿದ್ದರು, ಈ ವಿಚಾರವನ್ನು ಹನುಂತರಾಯ ತನ್ನ ಸ್ನೇಹಿತ ಚೌಡಯ್ಯನೊಂದಿಗೂ ಹಂಚಿಕೊಂಡಿದ್ದ. ವಾರದ ಹಿಂದೆ ಅಮೀನಾ ಬಾನು ಫೆÇೀನ್ ಕರೆ ಮಾಡಿ ಹನುಮಂತರಾಯನನ್ನು ಪುತ್ತೂರಿಗೆ ಬರುವಂತೆ ತಿಳಿಸಿದ ಹಿನ್ನಲೆಯಲ್ಲಿ ಆತ ಆಗಸ್ಟ್ 31 ರಂದು ರಾತ್ರಿ 7.30 ಗಂಟೆಗೆ ಮಾನ್ವಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ 10.15ಕ್ಕೆ ಮಂಗಳೂರಿನಿಂದ  ಬಸ್ಸು ಮೂಲಕ ಪುತ್ತೂರಿಗೆ ಬಂದಿದ್ದಾನೆ. ಇತ್ತ ಅಮೀನಾ ಬಾನು ಕೂಡಾ ಆಕೆಯ ಸ್ನೇಹಿತೆ ಗೌತಮಿ ಜೊತೆ ಬಂದಿದ್ದಾಳೆ. ಹೀಗೆ ಬಂದ ನಾಲ್ಕೂ ಮಂದಿ ಕೂಡಾ ಜೊತೆಯಾಗಿ ಬಸ್ಸು ನಿಲ್ದಾಣದ ಒಳಗಿರುವ ಪ್ರಯಾಣಿಕರು ಕುಳಿತು ಕೊಳ್ಳುವ ಆಸನದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ ಸುಮಾರು ನಾಲ್ಕೈದು ಮಂದಿ ಯುವಕರು ಇವರ ಬಳಿಗೆ ಬಂದು ಸುತ್ತುವರಿದು ತಡೆದು ನಿಲ್ಲಿಸಿ ಊರು, ಹೆಸರು ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಊರಿಗೆ ಬಂದು ನಮ್ಮ ಜಾತಿಯ ಹುಡುಗಿಯೊಂದಿಗೆ ಮಾತನಾಡುತ್ತೀರಾ? ನಿಮಗೆ ಎಷ್ಟು ಅಹಂಕಾರ ಎಂದು ಗದರಿಸಿ ಕೈಗಳಿಂದ ಇಬ್ಬರು ಯುವಕರಿಗೂ ಹಲ್ಲೆ ನಡೆಸಿ ಕಾಲಿನಿಂದ ತುಳಿದು ನಮ್ಮ ಮುಸ್ಲಿಂ ಹುಡುಗಿಯರ ಸುದ್ದಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಹಾಕಿರುತ್ತಾರೆ. ಹಲ್ಲೆ ಮಾಡಿದವರು ಅಪರಿಚಿತರಾಗಿದ್ದು, ಸುಮಾರು 25-28 ವರ್ಷ ವಯಸ್ಸಿನವರಾಗಿದ್ದರು. ಪರಸ್ಪರ ಮುಸ್ಲಿಂ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಯುವಕರು ಪುತ್ತೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2021, ಕಲಂ 143, 147, 341, 504, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

  • Blogger Comments
  • Facebook Comments

1 comments:

  1. ಇದು ಯಾವ ಜಿಹಾದ್ ಹೇಳ್ರೋ.. ತಿರುಗೋತಿಗಳಾ..

    ReplyDelete

Item Reviewed: ಪುತ್ತೂರು : ಜಾಲತಾಣದಲ್ಲಿ ಪರಿಚಯಸ್ಥರಾಗಿ ಮುಸ್ಲಿಂ ಯುವತಿಯನ್ನು ಬೇಟಿಯಾದ ಭಿನ್ನ ಕೋಮು ಯುವಕಗೆ ತಂಡದಿಂದ ಹಲ್ಲೆ, ಬೆದರಿಕೆ Rating: 5 Reviewed By: karavali Times
Scroll to Top