ಬಂಟ್ವಾಳ, ಅಕ್ಟೋಬರ್ 06, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಪ್ರಸ್ತುತ ಸುರಿಯುತ್ತಿರುವ ಮಳೆಗೆ ಉಂಟಾಗಿರುವ ಹಾನಿ ಪ್ರಕರಣಗಳ ವರದಿ ಮುಂದುವರಿದಿದೆ. ಪಿಲಿಮೋಗರು ಗ್ರಾಮದ ಬಲ್ಲಿದಕೋಡಿ ನಿವಾಸಿ ಆನಂದ ಪೂಜಾರಿ ಬಿನ್ ಚೀಂಕ್ರ ಪೂಜಾರಿ ಅವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ. ರಮೇಶ್ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಹಾನಿಯಾಗುತ್ತದೆ. ಗುಲಾಬಿ ಶೀನ ಶೆಟ್ಟಿಯವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ. ಉಮೇಶ್ ಬಿನ್ ತ್ಯಾಂಪನ್ನ ಶೆಟ್ಟಿ ಅವರ ಕಚ್ಚಾ ಮನೆ ತೀವ್ರ ಹಾನಿಯಾಗುತ್ತದೆ. ಅಪ್ಪಿ ಕೋಂ ನಾರ್ಣ ಪೂಜಾರಿ ಅವರ ಅಡಿಕೆ ತೋಟಕ್ಕೆ ಹಾನಿಯಾಗಿರುತ್ತದೆ. ಮಾಧವ ಭಟ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿರುತ್ತದೆ. ಅಪ್ಪಿ ಕೋಂ ತಿಮ್ಮಪ್ಪ ಪೂಜಾರಿ ಅವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ. ಕೊಯಿಲ ಗ್ರಾಮದ ಶೇಖರ ಅಂಚನ್ ಅವರ ತೋಟ ಹಾಗೂ ಭತ್ತ ಕೃಷಿಗೆ ಹಾನಿಯಾಗಿರುತ್ತದೆ.
ಸಂಗಬೆಟ್ಟು ಗ್ರಾಮದ ಸಿರಿಲ್ ಮೊರಾಸ್ ಅವರ ಮನೆ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಉಳಿ ಗ್ರಾಮದ ಸುಶೀಲ ಕೋಂ ಕೃಷ್ಣಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ತೀವ್ರ ಹಾನಿಯಾಗಿದ್ದು, ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ ಶೇಖರ ಪೂಜಾರಿ ಅವರ ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಪಿಲಿಮೊಗರು ಗ್ರಾಮದ ಅಶ್ವಥ್ ರೈ ಅವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ. ವೆಂಕಟೇಶ್ ಭಟ್ ಅವರ ಪಕ್ಕಾ ಮನೆ ತೀವ್ರ ಹಾನಿಯಾಗಿರುತ್ತದೆ.
ಕೊಗ್ಗ ಪ್ರಭು, ಕೊರಗಪ್ಪ ಶೆಟ್ಟಿ, ಲಕ್ಷ್ಮಿ ಶೆಟ್ಟಿ, ಬೇಬಿ ಶೆಟ್ಟಿ, ಕೊರಗ ಶೆಟ್ಟಿ, ಡೇವಿಡ್ ಮೊಂತೆರೋ, ರೇಮಂಡ್, ಫೆÇ್ಲೀರಿನ್, ಭಾಸ್ಕರ ಅವರ ಅಡಿಕೆ ತೋಟಕ್ಕೆ ಹಾನಿಯಾಗಿರುತ್ತದೆ.
ಬುಡೋಳಿ ಗ್ರಾಮದ ಕೊರಗಪ್ಪ ಶೆಟ್ಟಿ, ಬಾಬು ಶೆಟ್ಟಿ, ನೋನು ಶೆಟ್ಟಿ, ಸದಾನಂದ ಶೆಟ್ಟಿ, ಉಮಾನಾಥ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿ ಮಳೆ ಹಾನಿ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment