ಬಂಟ್ವಾಳ, ನವೆಂಬರ್ 06, 2021 (ಕರಾವಳಿ ಟೈಮ್ಸ್) : ತಾಲೂಕಿನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಹಾಗೂ ಜೊತೆಯಾಗಿ ಲೈಂಗಿಕ ಅತ್ಯಾಚಾರ ನಡೆಸಿದ ಬಗ್ಗೆ ದಾಖಲಾದ ಪ್ರತ್ಯೇಕ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮೂರು ಮಂದಿ ಆರೋಪಿಗಳಾದ ತಾಲೂಕಿನ ಫರಂಗಿಪೇಟೆಯ ರಿಕ್ಷಾ ಚಾಲಕ ರಿಝ್ವಾನ್ ಮತ್ತು ಅರ್ಕುಳ ನಿವಾಸಿಗಳಾದ ಕಾಸಿಂ ಹಾಗೂ ಅಜ್ಮಲ್ ಹುಸೈನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನವೆಂಬರ್ 4 ರಂದು ಬಂಟ್ವಾಳ ತಾಲೂಕಿನ ಮಹಿಳೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದು ತನ್ನ ಅಪ್ರಾಪ್ತ ಮಗಳಿಗೆ ಫರಂಗಿಪೇಟೆ ರಿಕ್ಷಾ ಚಾಲಕ ಮೈ ಕೈ ಮುಟ್ಟಿ ಲೈಂಗಿಕ ಶೋಷಣೆ ಮಾಡಿದ್ದಾನೆಂಬ ದೂರಿನ ಮೇರೆಗೆ ಕಲಂ 354 (ಎ) ಐಪಿಸಿ ಮತ್ತು ಕಲಂ 7, 8 ಪೆÇೀಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿ ಆರೋಪಿ ರಿಕ್ಷಾ ಚಾಲಕ ರಿಝ್ವಾನ್ ನನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಪ್ರಕಾರ ಆತನಿಗೆ ನ್ಯಾಯಾಂಗ ವಿಧಿಸಲಾಗಿದೆ.
ನವೆಂಬರ್ 5 ರಂದು ಅದೇ ಅಪ್ರಾಪ್ತ ಬಾಲಕಿಯು ತನ್ನ ತಾಯಿಯೊಂದಿಗೆ ಠಾಣೆಗೆ ಬಂದು ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಒಬ್ಬರಾದ ಮೇಲೆ ಇನ್ನೊಬ್ಬರು ಜೊತೆಯಲ್ಲಿ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದು, ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಲಂ 376ಡಿ, 506 ಜೊತೆಗೆ 34 ಐಪಿಸಿ ಮತ್ತು ಕಲಂ 4, 5, (ಜಿ), 6 ಪೆÇೀಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ ದಾಖಲಾದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸ್ ತನಿಖಾ ತಂಡ ಆರೋಪಿಗಳಾದ ಅರ್ಕುಳ ನಿವಾಸಿಗಳಾದ ಕಾಸಿಂ ಹಾಗೂ ಅಜ್ಮಲ್ ಹುಸೈನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಿಲ್ಲಾ ಎಸ್ಪಿ ಋಷಿಕೇಶ್ ಸೋನವಾನೆ ಭಗವಾನ್, ಅಡಿಶನಲ್ ಎಸ್ಪಿ ಡಾ ಶಿವಕುಮಾರ್ ಗುಣಾರೆ ಅವರುಗಳ ನಿರ್ದೇೀಶನದಂತೆ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಮಹಿಳಾ ಪಿಎಸ್ಸೈ ಭಾರತಿ, ಪ್ರೊಬೆಷನರಿ ಪಿಎಸ್ಸೈ ರಾಮಕೃಷ್ಣ, ವೀಣಾ ರಾಮಚಂದ್ರ, ಎಎಸ್ಸೈ ಬಾಲಕೃಷ್ಣ, ಸಿಬ್ಬಂದಿಗಳಾದ ಜನಾರ್ದನ, ಸುರೇಶ್, ಪುನೀತ್, ಮನೋಜ್ ಕುಮಾರ್, ಲೋಲಾಕ್ಷಿ, ವಿಶಾಲಾಕ್ಷಿ ಅವರನ್ನೊಳಗೊಂಡ ಪೊಲೀಸ್ ತನಿಖಾ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ.
0 comments:
Post a Comment