ಮಂಗಳೂರು, ನವೆಂಬರ್ 11, 2021 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆ, ಮಂಗಳೂರು ಅಂಚೆ ವಿಭಾಗದಿಂದ ವಿಭಾಗೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 146 ಅಂಚೆ ಸಿಬ್ಬಂದಿಗಳಿಗೆ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂಚೆ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಅಂಚೆ ಜೀವ ವಿಮೆ, ಐಪಿಪಿಬಿ ಖಾತೆ, ಎಇಪಿಎಸ್, ಜೀವನ್ ಪ್ರಮಾಣ, ತ್ವರಿತ ಅಂಚೆ, ಇ-ಪೇಮೆಂಟ್, ಡಬ್ಲ್ಯುಯುಎಂಟಿ, ಆಧಾರ್ ನೋಂದಣಿ/ ತಿದ್ದುಪಡಿ ಸೇವೆ, ಸಾವರಿನ್ ಗೋಲ್ಡ್ ಬಾಂಡ್, ಸಿಎಸ್‍ಸಿ ಮೊದಲಾದ ಸೇವೆಗಳ ಮೂಲಕ ಗರಿಷ್ಠ ವ್ಯವಹಾರಗೈದ ಸಾಧಕರಿಗೆ ಮಂಗಳೂರು ನಗರದ ಡಿಸಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಹರಿರಾಮ್ ಶಂಕರ್ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಇದೇ ವೇಳೆ ಭಾರತೀಯ ಅಂಚೆ ಇಲಾಖೆ, ಮಂಗಳೂರು ಅಂಚೆ ವಿಭಾಗದಿಂದ “ವಿಚಕ್ಷಣ ಸಪ್ತಾಹ 2021” ರ ಅಂಗವಾಗಿ ವಿಭಾಗೀಯ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಮಂಗಳೂರು ಹಿರಿಯ ಅಂಚೆ ಅಧೀಕ್ಷ ಶ್ರೀಹರ್ಷ ಅವರು ಪ್ರಶಸ್ತಿ ಪಡೆದ ಸಿಬ್ಬಂದಿಗಳನ್ನು ಅಭಿನಂದಿಸಿದರು. ಸಹಾಯಕ ಅಂಚೆ ಪಾಲಕ ಪ್ರದೀಪ್ ಕುಮಾರ್ ಹಾಗೂ ಭವಾನಿ ಶಂಕರ್ ಉಪಸ್ಥಿತರಿದ್ದರು. ಮಂಗಳೂರು ಸಹಾಯಕ ಅಂಚೆ ನಿರೀಕ್ಷಕ ಶ್ರೀನಾಥ್ ಎನ್. ಬಿ ಸ್ವಾಗತಿಸಿ, ವರಿಷ್ಠ ಅಂಚೆ ಪಾಲಕ ರವಿ ವಂದಿಸಿದರು. ಪ್ರತಿಭಾ ಶೇಟ್ ಪ್ರಾರ್ಥಿಸಿದರು. ಮಂಗಳೂರು ವಿಭಾಗೀಯ ಅಂಚೆ ಕಚೇರಿಯ ಕಚೇರಿ ಸಹಾಯಕ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment