ಓಮಿಕ್ರಾನ್ ಎಫೆಕ್ಟ್ : ಹೊಸ ವರ್ಷ ಆಡಂಬರ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ರಾತ್ರಿ ನಿರ್ಬಂಧದ ಮೊರೆ ಹೋದ ರಾಜ್ಯ ಸರಕಾರ, ಅಂತರಾಜ್ಯ ಪ್ರಯಾಣ ಹೊರತುಪಡಿಸಿ ಮಂಗಳವಾರ ರಾತ್ರಿಯಿಂದ ಎಲ್ಲವೂ ಬಂದ್ - Karavali Times ಓಮಿಕ್ರಾನ್ ಎಫೆಕ್ಟ್ : ಹೊಸ ವರ್ಷ ಆಡಂಬರ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ರಾತ್ರಿ ನಿರ್ಬಂಧದ ಮೊರೆ ಹೋದ ರಾಜ್ಯ ಸರಕಾರ, ಅಂತರಾಜ್ಯ ಪ್ರಯಾಣ ಹೊರತುಪಡಿಸಿ ಮಂಗಳವಾರ ರಾತ್ರಿಯಿಂದ ಎಲ್ಲವೂ ಬಂದ್ - Karavali Times

728x90

25 December 2021

ಓಮಿಕ್ರಾನ್ ಎಫೆಕ್ಟ್ : ಹೊಸ ವರ್ಷ ಆಡಂಬರ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ರಾತ್ರಿ ನಿರ್ಬಂಧದ ಮೊರೆ ಹೋದ ರಾಜ್ಯ ಸರಕಾರ, ಅಂತರಾಜ್ಯ ಪ್ರಯಾಣ ಹೊರತುಪಡಿಸಿ ಮಂಗಳವಾರ ರಾತ್ರಿಯಿಂದ ಎಲ್ಲವೂ ಬಂದ್

ಬೆಂಗಳೂರು, ಡಿಸೆಂಬರ್ 26, 2021 (ಕರಾವಳಿ ಟೈಮ್ಸ್) : ಓಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗುವ ಆಡಂಬರದ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವ ಹಿನ್ನಲೆಯಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿರುವ ರಾಜ್ಯ ಸರಕಾರ ರಾಜ್ಯಾದ್ಯಂತ ಡಿಸೆಂಬರ್ 20 ರಿಂದ ಮುಂದಿನ 10 ದಿನಗಳ ಕಾಲ ರಾತ್ರಿ ನಿರ್ಬಂಧದ ಮೊರೆ ಹೋಗಿದೆ. 

ಈ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ ಸುಧಾಕರ್, ರಾಜ್ಯದಲ್ಲಿ ಡಿ. 28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಎಲ್ಲ ಸಂಭ್ರಮಾಚರಣೆ, ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಎಲ್ಲವೂ ಬಂದ್ ಆಗಲಿದೆ ಎಂದಿದ್ದಾರೆ.

ಮಂಗಳವಾರ ರಾತ್ರಿ 10 ಗಂಟೆಯಿಂದಲೇ ಎಲ್ಲವೂ ಬಂದ್ ಆಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಎಲ್ಲಾ ಚವಟಿಕೆಗಳಿಗೂ ನಿರ್ಬಂಧವನ್ನು ಹೇರಲಾಗಿದೆ. ಅಂತರ್ ರಾಜ್ಯ ಪ್ರಯಾಣಕ್ಕಷ್ಟೆ ರಾತ್ರಿ 10 ಗಂಟೆ ನಂತರ ಅವಕಾಶವನ್ನು ನೀಡಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಹೋಟೆಲ್ ಆಸನಗಳಲ್ಲಿ ಶೇ. 50 ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ, ಸಭೆ ಸಮಾರಂಭ, ಪಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ. 50 ರಷ್ಟು ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ರಾತ್ರಿ 10 ಗಂಟೆ ನಂತರ ಸಿನಿಮಾ ಥಿಯೇಟರ್ ಬಂದ್ ಆಗಲಿದೆ.

ಒಮಿಕ್ರಾನ್ ರೂಪಾಂತರಿ ಕಂಡುಬಂದಿರುವ ಸಂದರ್ಭದಲ್ಲಿ ಪ್ರಧಾನಿ  ನರೇಂದ್ರ ಮೋದಿ ಅವರ ಸಮಯೋಚಿತ ನಿರ್ಧಾರ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಜನವರಿ 3 ರಿಂದ 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುಗು, ಆರೋಗ್ಯ ಮತ್ತು  ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟು ಸಹ-ಅಸ್ವಸ್ಥತೆ ಉಳ್ಳವರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದರು.

ಓಮೈಕ್ರಾನ್ ಸೋಂಕನ್ನು ಶೀಘ್ರವೇ ಪತ್ತೆ ಹಚ್ಚಲು ಹೊಸ ಯಂತ್ರದ ಅವಶ್ಯಕತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಆ ಉಪಕರಣ ಖರೀದಿಸಲು ಸರಕಾರ ಚಿಂತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಓಮಿಕ್ರಾನ್ ಎಫೆಕ್ಟ್ : ಹೊಸ ವರ್ಷ ಆಡಂಬರ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ರಾತ್ರಿ ನಿರ್ಬಂಧದ ಮೊರೆ ಹೋದ ರಾಜ್ಯ ಸರಕಾರ, ಅಂತರಾಜ್ಯ ಪ್ರಯಾಣ ಹೊರತುಪಡಿಸಿ ಮಂಗಳವಾರ ರಾತ್ರಿಯಿಂದ ಎಲ್ಲವೂ ಬಂದ್ Rating: 5 Reviewed By: karavali Times
Scroll to Top