ಉಪ್ಪಿನಂಗಡಿ : ಮುಸ್ಲಿಂ ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ : ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲು - Karavali Times ಉಪ್ಪಿನಂಗಡಿ : ಮುಸ್ಲಿಂ ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ : ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲು - Karavali Times

728x90

5 December 2021

ಉಪ್ಪಿನಂಗಡಿ : ಮುಸ್ಲಿಂ ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ : ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲು

ಉಪ್ಪಿನಂಗಡಿ, ಡಿಸೆಂಬರ್ 06, 2021 (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಅಂಡೆತ್ತಡ್ಕದಲ್ಲಿ ಭಾನುವಾರ ಸಂಜೆ ಗುಂಪೊಂದು ಮುಸ್ಲಿಂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿಂತೆ ಅಂಡೆತ್ತಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಪಯಾಜ್ (24) ಅವರು ಪೊಲೀಸರಿಗೆ ನೀಡಿದ ಹೇಳಿಕೆಯಂತೆ ಭಾನುವಾರ (ಡಿ 5) ರಂದು ಸಂಜೆ ಸುಮಾರು 7.30 ರ ವೇಳೆಗೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ ಮಂಜುಶ್ರೀ ಸ್ಟೋರಿಗೆ ದಿನಸಿ ವಸ್ತು ಖರೀದಿ ಮಾಡಲು ತನ್ನ ಸ್ನೇಹಿತ ಅಫೀಝನೊಂದಿಗೆ ಹೋಗುತ್ತಿರುವಾಗ ಅಂಗಡಿ ಬಳಿಗೆ ಆರೋಪಿತರುಗಳಾದ ಜಯರಾಮ್, ಸಂದೀಪ್, ನವೀನ್, ಕಾರ್ತಿಕ್, ಸುಮಂತ ಶೆಟ್ಟಿ, ಪ್ರೀತಮ್, ಲತೇಶ್ ನೂಜಿ ಅವರುಗಳು ಅಕ್ರಮ ಕೂಟ ಸೇರಿಕೊಂಡು  ಮಾರಕಾಸ್ತ್ರವಾದ ಕಬ್ಬಿಣದ ರಾಡ್ ಹಿಡಿದುಕೊಂಡು ಮೂರು ಮೋಟಾರು ಸೈಕಲಿನಲ್ಲಿ ಬಂದು ನಮ್ಮನ್ನುದ್ದೇಶಿಸಿ “ಬೇವರ್ಸಿ ರಂಡೆ ಮಗ ಬಾರಿ ಹಾರಾಡಿತ್ತೀಯಾ” ಎಂಬುದಾಗಿ ಅವಾಚ್ಯ ಶಬ್ದದಿಂದ ಬೈಯುತ್ತಾ ಜಯರಾಮ ಎಂಬಾತನು ಫಯಾಜನನ್ನು ನೆಲಕ್ಕೆ ದೂಡಿ ಹಾಕಿ, ಸ್ನೇಹಿತ ಅಫೀಝ ಎಂಬಾತ£ಗೆ ಲತೇಶ ಎಂಬವನು ರಾಡಿನಿಂದ ಕೈ ಭಾಗಕ್ಕೆ ಹೊಡೆದಿರುತ್ತಾರೆ. ಈ ಸಂದರ್ಭ ಫಯಾಝ್ ಹಾಗೂ ಸ್ನೇಹಿತ ಅಫೀಝ್ ತಪ್ಪಿಸಿಕೊಳ್ಳಲು ಓಡಿ ಹೋದಾಗ ಆರೋಪಿಗಳು ಮೋಟರ್ ಸೈಕಲಿನಲ್ಲಿ ರಾಡ್ ಸಮೇತ ಅಟ್ಟಾಡಿಸಿಕೊಂಡು ಬಂದು ಜಯರಾಮ ಎಂಬಾತನು ಫಯಾಝನನ್ನು ದೂಡಿ ಹಾಕಿದ್ದರಿಂದ ಆತನ ಕಾಲಿನ ಮೊಣ ಗಂಟಿಗೆ ಹಾಗೂ ಎರಡು ಕೈಗಳಿಗೆ ಗಾಯ ಉಂಟಾಗಿರುವುದಲ್ಲದೆ ಕಿಸೆಯಲ್ಲಿದ್ದ ಮೊಬೈಲ್ ಪೆÇೀನು ಜಖಂಗೊಂಡು 8 ಸಾವಿರ ರೂಪಾಯಿ ನಷ್ಟವಾಗಿರುತ್ತದೆ ಎಂದು ದೂರಲಾಗಿದೆ. 

ಫಯಾಝ್ ನೀಡಿದ ದೂರಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2021 ಕಲಂ 143, 147, 148, 504, 324, 323, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡೆತ್ತಡ್ಕ ನಿವಾಸಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಜಕಾರಿಯಾ (39) ಅವರು ಮತ್ತೊಂದು ದೂರು ದಾಖಲಿಸಿದ್ದು, ಈತನ ಹೇಳಿಕೆಯಂತೆ ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ ಇಕ್ಬಾಲ್ ರವರ ಜಿನಸು ಅಂಗಡಿ  ಬಳಿ  ದೂರುದಾರ ಅಬ್ದುಲ್ ಝಕಾರಿಯಾ ಅವರು ಸಿದ್ದಿಕ್ ಅವರೊಂದಿಗೆ ಇರುವಾಗ ಸುಮಾರು 30 ಬೈಕುಗಳಲ್ಲಿ ತಲಾ ಇಬ್ಬರಂತೆ ಬಂದ ಆರೋಪಿಗಳು ಯಾವುದೋ ದ್ವೇಷದಲ್ಲಿ ಅಕ್ರಮ ಕೂಟ ಸೇರಿಕೊಂಡು ಮಾರಕಾಸ್ತ್ರಗಳಾದ ತಲವಾರ್ ಮತ್ತು ರಾಡ್‍ಗಳನ್ನು ಹಿಡಿದುಕೊಂಡು ಬಂದು ಝಕಾರಿಯಾ ಅವರ ಪರಿಚಯದ ಆರೋಪಿ ಸಂದೀಪ್ ಕುಪ್ಟೆಟ್ಟಿ ಎಂಬಾತನು ಬೈಕ್‍ನಲ್ಲಿ ಸಹ ಸವಾರನಾಗಿ ಆರೋಪಿ ಜಯರಾಮ ಎಂಬಾತನನ್ನು ಕುಳ್ಳಿರಿಸಿಕೊಂಡು ಬಂದು  ಮೋಟಾರ್ ಸೈಕಲ್ ನಿಲ್ಲಿಸಿ ಇಳಿದು ಸಂದೀಪನು ಸಿದ್ದಿಕ್ ನನ್ನು ತೋರಿಸಿ  ಅವರಿಬ್ಬರು ತಮ್ಮೊಳಗೆ ಇವನಾ? ಎಂದು ಕೇಳಿದಾಗ  ಇವನಲ್ಲ ಎಂದು ಹೇಳಿದಾಗ ಸಿದ್ದಿಕ್ ನಿಗೆ  ತಲವಾರಿನಿಂದ ಕೈಗೆ, ಬೆನ್ನಿಗೆ ಹಾಗೂ ಹಿಂಭಾಗಕ್ಕೆ ಕಡಿದಿರುವುದಲ್ಲದೇ ಆರೋಪಿಗಳಾದ ಸುಪ್ರೀತ್, ಪ್ರೀತಮ್, ಲತೇಶ್ ಅವರುಗಳು ಅವರ ಕೈಯಲ್ಲಿದ್ದ ರಾಡಿನಿಂದ  ಸಿದ್ದಿಕನ ಕೈಗೆ ಹೊಡೆದಿರುತ್ತಾರೆ. ಬಳಿಕ ಆರೋಪಿ ಜಯರಾಮನು ಜಕಾರಿಯಾನ ತಲೆಯ ಹಿಂಬಾಗಕ್ಕೆ  ಕಡಿದಾಗ ಆರೋಪಿ ಸಂದೀಪ್ ರಾಡಿನಿಂದ ಬಲ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿರುತ್ತಾರೆ. ಈ ಸಂದರ್ಭ ಜಕಾರಿಯಾ ಹಾಗೂ ಸಿದ್ದಿಕ್ ಅವರುಗಳು ಆರೋಪಿಗಳಿಂದ ತಪ್ಪಿಸಿಕೊಂಡು   ಓಡಿ ಹೋದ ಸಮಯ ಆರೋಪಿಗಳು ಮೋಟಾರ್ ಸೈಕಲಿನಲ್ಲಿ ಹಿಂಬಾಲಿಸಿಕೊಂಡು ಮುಂದಕ್ಕೆ ಹೋಗಿ  ನಡೆದುಕೊಂಡು ಬರುತ್ತಿದ್ದ ಅಯೂಬ್ ಖಾನ್ ಅವರ ತಲೆಯ ಬಾಗಕ್ಕೆ  ಆರೋಪಿ ಜಯರಾಮನು ಕಡಿದು ಮಾರಣಾಂತಿಕ ಹಲ್ಲೆ ನಡೆಸಿದಾಗ ಅಸುಪಾಸಿನ ಜನ ಸೇರುವುದನ್ನು ಕಂಡು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಹೀಂ ಅವರ ಕಾರಿನಲ್ಲಿ ಗಾಯಗೊಂಡ ಅಯೂಬ್ ಖಾನ್, ಸಿದ್ದಿಕ್, ಮತ್ತು ಜಕಾರಿಯಾರನ್ನು ಕುಳ್ಳಿರಿಸಿಕೊಂಡು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು  ಅಯೂಬ್ ಖಾನ್  ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಇತರ ಇಬ್ಬರು ಗಾಯಾಳುಗಳಾದ ಝಕಾರಿಯಾ ಹಾಗೂ ಸಿದ್ದೀಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

ಈ ದೂರಿಗೆ ಸಂಬಂಧಿಸಿದಂತೆ ಠಾಣಾ ಅಪರಾಧ ಕ್ರಮಾಂಕ 151/2021 ಕಲಂ 143, 147, 148, 324, 307 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಮುಸ್ಲಿಂ ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ : ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲು Rating: 5 Reviewed By: karavali Times
Scroll to Top