ನೇರಳಕಟ್ಟೆ : ನೇತಾಜಿ ಗೆಳೆಯರ ಬಳಗದ ವತಿಯಿಂದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ - Karavali Times ನೇರಳಕಟ್ಟೆ : ನೇತಾಜಿ ಗೆಳೆಯರ ಬಳಗದ ವತಿಯಿಂದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ - Karavali Times

728x90

2 January 2022

ನೇರಳಕಟ್ಟೆ : ನೇತಾಜಿ ಗೆಳೆಯರ ಬಳಗದ ವತಿಯಿಂದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ

ಬಂಟ್ವಾಳ, ಜನವರಿ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ನೇರಳಕಟ್ಟೆ ಸಮೀಪದ ನೇತಾಜಿ ನಗರದ ನೇತಾಜಿ ಗೆಳೆಯರ ಬಳಗದ ವತಿಯಿಂದ ಪುರುಷರ 60 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟವು ಶನಿವಾರ (ಜ 1) ನೇರಳಕಟ್ಟೆ ರೈಲ್ವೇ ನಿಲ್ದಾಣದ ಸಮೀಪದ ಮೈದಾನದಲ್ಲಿ ನಡೆಯಿತು.

ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ನೇರಳಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಉದ್ಘಾಟಿಸಿದರು. ಬಂಟ್ವಾಳ ತಾ ಪಂ ಮಾಜಿ ಸದಸ್ಯ ಮಾಧವ ಮಾವೆ, ಅನಂತಾಡಿ ಗ್ರಾ ಪಂ ಅಧ್ಯಕ್ಷ ಗಣೇಶ್ ಪೂಜಾರಿ, ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾ  ಪಂ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ. ಪೂಜಾರಿ, ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಧನಂಜಯ ಗೌಡ, ಜಯಂತಿ ಹರೀಶ್ ಪೂಜಾರಿ, ಶಾಲಿನಿ ಹರೀಶ್, ಕೆದಿಲ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಮುರುವ, ನೆಟ್ಲಮುಡ್ನೂರು ಗ್ರಾಮ ಕರಣಿಕ ಮಂಜುನಾಥ್, ನೇರಳಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ  ಸುರೇಶ್ ರೈ ಕುರ್ಲೆತ್ತಿಮಾರ್, ನೇರಳಕಟ್ಟೆ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನಕರ ನಾಯಕ್, ನಿರ್ದೇಶಕರಾದ ನಿರಂಜನ್ ರೈ ಕುರ್ಲೆತ್ತಿಮಾರ್, ಪಾಂಡುರಂಗ ಕಾಮತ್, ಡಾ. ಮನೋಹರ್ ರೈ ಅಂತರಗುತ್ತು, ಡಾ. ಎಲ್ಕಣ ಗಣರಾಜ್, ಭಾರತೀಯ ರೈಲ್ವೆ ಇಲಾಖೆಯ ವಿಠಲ ನಾಯ್ಕ, ತಿವಾರಿ, ಹಕೀಂ ಕಲ್ಪಾಡಿಗದ್ದೆ,  ಸುರತ್ಕಲ್ ಎನ್.ಐ.ಟಿ.ಕೆ. ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕ ದಿನೇಶ್ ನಾಯ್ಕ್, ಉಪ್ಪಿನಂಗಡಿ ಠಾಣಾ ಪೆÇಲೀಸ್ ಕೃಷ್ಣಪ್ಪ ಗಣೇಶ ನಗರ, ಮಾಣಿ ವಲಯ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸಂಪತ್ ಕಡೇಶ್ವಾಲ್ಯ, ನಿವೃತ್ತ ಶಿಕ್ಷಕ ರಾಮಚಂದ್ರ ಮಾಸ್ಟರ್, ನಿವೃತ್ತ ಸೈನಿಕ ನಿತೀಶ್ ಕುಮಾರ್ ಪಂತಡ್ಕ, ನೇರಳಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ವಾಮನ ಕುಲಾಲ್, ನೇರಳಕಟ್ಟೆ ಪ್ರೆಂಡ್ಸ್ ಕೋಶಾಧಿಕಾರಿ ರೋಹಿತಾಶ್ವ ಗಣೇಶನಗರ, ವಿಷ್ಣುಮೂರ್ತಿ ಗೆಳೆಯರ ಬಳಗ ಅಧ್ಯಕ್ಷ ಸುನೀಲ್, ಉರ್ದಿಲ ನವಯುಗ ಜನಸ್ನೇಹಿ ಅಧ್ಯಕ್ಷ ಸುಜಿತ್, ಪೆರಾಜೆ ಯುವ ವೇದಿಕೆ ಅಧ್ಯಕ್ಷ ಯತಿರಾಜ್ ಪೆರಾಜೆ, ವಿಶುಕುಮಾರ್ ವೈ.ಸಿ.ಜಿ, ಶೀತಲ್ ನಾಯ್ಕ ವೈ.ಸಿ.ಜಿ, ಹರೀಶ್ ಆಳ್ವ ಮಾದೇಲು, ಸಂದೀಪ್ ಶೆಟ್ಟಿ ಪಂತಡ್ಕ, ಡಾ. ನಿರಂಜನ್ ರೈ ಎಲ್ಕಾಜೆ, ಹರೀಶ್ ಪೂಜಾರಿ ಮುಜಲ, ರಮ್ಲಾನ್ ಕಲ್ಪಾಡಿಗದ್ದೆ, ಬೇಬಿ ನಾಯ್ಕ ನೇರಳಕಟ್ಟೆ, ಗಂಗಾಧರ ಪಂಡಿತ್ ಗೋಳಿಕಟ್ಟೆ, ಪ್ರವೀಣ್ ಶೆಟ್ಟಿ ಕೊಡಂಗೆಮಾರು, ಸಂಜೀವ ಶೆಟ್ಟಿ ಕಲ್ಪಾಡಿಗದ್ದೆ, ಸಂಜೀವ ಪೂಜಾರಿ ಪಂತಡ್ಕ, ಪ್ರವೀಣ್ ಶೆಟ್ಟಿ ಕಲ್ಲಾಜೆ, ಸಂಜೀವ ಶೆಟ್ಟಿ ತಂಗಳಪಾಲು, ದೇವಪ್ಪ ಗೌಡ ದಾಸಕೋಡಿ,  ಸುಂದರ ಗೌಡ ದಾಸಕೋಡಿ, ದರ್ಣಪ್ಪ ಗೌಡ ದಾಸಕೋಡಿ, ರಾಜೀವ ನಾಯರ್, ರಾಜೇಶ್ ಕರುವನ್, ಅರ್ಬಿ ರಾಮಣ್ಣ ಪೂಜಾರಿ ಕಬಕ, ಪ್ರಕಾಶ್ ರೈ ಕುರ್ಲೆತ್ತಿಮಾರ್, ಹರೀಶ್ ಮೂಲ್ಯ ಅಂಗಲಾಜೆ, ಮಿಥುನ್ ಶೆಟ್ಟಿ ಕೊಡಂಗೆಮಾರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಡಿ. ತನಿಯಪ್ಪ ಗೌಡ ದಾಸಕೋಡಿ, ಮೋಹನ್ ಗೌಡ, ಯಶಸ್ವಿ ಕುದುಮಾನ್ ಅವರನ್ನು ಸನ್ಮಾನಿಸಲಾಯಿತು. ಡಾ. ನಿರಂಜನ್ ರೈ ಎಲ್ಕಾಜೆ, ವಸಂತ ನಾಯ್ಕ ಎಲ್ಕಾಜೆ, ಆನಂದ ನಾಯ್ಕ ನೇತಾಜಿ ನಗರ,  ಹೊನ್ನಪ್ಪ ಗೌಡ ದಾಸಕೋಡಿ, ನಾರಾಯಣ ಗೌಡ ಉರ್ದಿಲ, ಬಾಬು ಗೌಡ ದಾಸಕೋಡಿ, ಅವರನ್ನು ಅಭಿನಂದಿಸಲಾಯಿತು. 

ರವಿ ನಾಯ್ಕ, ಹರೀಶ್ ನಾಯ್ಕ ಹಾಗೂ ದುರ್ಗಾ ಪ್ರಸಾದ್ ಸನ್ಮಾನಿತರನ್ನು ಪರಿಚಯಿಸಿದರು. ಮಜೀದ್ ಮಾಣಿ, ಪದ್ಮನಾಭ ಕನಪಾದೆ, ಪ್ರದೀಪ್, ರಂಜಿತ್, ರಫೀಕ್ ಆತೂರು ಹಾಗೂ ಅನೂಪ್ ಪುತ್ತೂರು ಪಂದ್ಯಾಟದ ತೀರ್ಪುಗಾರರಾಗಿ ಸಹಕರಿಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ರೈ ಪ್ರಸ್ತಾವನೆಗೈದರು. ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ ಸ್ವಾಗತಿಸಿ, ಸದಸ್ಯ ಅಶ್ವತ್ ವಂದಿಸಿದರು. ಶಿಕ್ಷಕ ಗೋಪಾಲಕೃಷ್ಣ, ನಝೀರ್ ಕುಕ್ಕಾಜೆ ಹಾಗೂ ನೇತಾಜಿ ಗೆಳೆಯರ ಬಳಗದ ಕಾರ್ಯದರ್ಶಿ ಗಣೇಶ ಎಂ. ವಿವಿಧ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ನೇರಳಕಟ್ಟೆ : ನೇತಾಜಿ ಗೆಳೆಯರ ಬಳಗದ ವತಿಯಿಂದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ Rating: 5 Reviewed By: karavali Times
Scroll to Top