ಬಂಟ್ವಾಳ, ಫೆಬ್ರವರಿ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ.ಸಿ. ರೋಡು ಸಮೀಪದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ವತಿಯಿಂದ 23ನೇ ಸಾಮೂಹಿಕ ಶನ್ಯೆಶ್ವರ ಪೂಜೆ ಹಾಗೂ 40 ನೇ ವರ್ಷದ ವಾರ್ಷಿಕೋತ್ಸವವು ಫೆಬ್ರವರಿ 26 ರಂದು ಶನಿವಾರ ಅಲೆತ್ತೂರು ಶ್ರೀ ಪಂಜುರ್ಲಿ ದೈವಸ್ಥಾನದ ಬಳಿ ಮಂಗಳ ಭವನದಲ್ಲಿ ನಡೆಯಲಿದೆ.
ಪೂರ್ವಾಹ್ನ 8.30ಕ್ಕೆ ಗಣಹೋಮ, ಸಂಜೆ ಗಂಟೆ 5.30 ಕ್ಕೆ ಶೀ ಶನ್ಯೆಶ್ವರ ಪೂಜೆ ಪ್ರಾರಂಭ, ರಾತ್ರಿ 7.30 ಮಂಗಳಾರತಿ ಹಾಗೂ ಪ್ರಸಾದ ವಿತರಣೆ, ಪೂಜಾವಿಧಿ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 8.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10ಕ್ಕೆ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಅಭಿನಯಿಸಿರುವ ತುಳು ಹಾಸ್ಯ ನಾಟಕ "ನಿತ್ಯೆ ಬನ್ನಗ" ಪ್ರದರ್ಶನ ಗೊಳ್ಳಲಿದೆ ಎಂದು ಮಂಗಳ ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ.
0 comments:
Post a Comment