ಪಿಯುಸಿ ತರತಿಗಳಿಗೆ ಫೆ. 15ರವರೆಗೆ ರಜೆ ಘೋಷಿಸಿ ಸರಕಾರ ಆದೇಶ - Karavali Times ಪಿಯುಸಿ ತರತಿಗಳಿಗೆ ಫೆ. 15ರವರೆಗೆ ರಜೆ ಘೋಷಿಸಿ ಸರಕಾರ ಆದೇಶ - Karavali Times

728x90

12 February 2022

ಪಿಯುಸಿ ತರತಿಗಳಿಗೆ ಫೆ. 15ರವರೆಗೆ ರಜೆ ಘೋಷಿಸಿ ಸರಕಾರ ಆದೇಶ

ಬೆಂಗಳೂರು, ಫೆಬ್ರವರಿ 12, 2022 (ಕರಾವಳಿ ಟೈಮ್ಸ್) : ಕ್ಯಾಂಪಸ್ ಸಂಘರ್ಷ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪದವಿಪೂರ್ವ ಕಾಲೇಜುಗಳಿಗೂ ಫೆಬ್ರವರಿ 15ರವರೆಗೆ ರಜೆ ಘೋಷಿಸಿ ಆದೇಶ ಮಾಡಿದೆ. ನಿನ್ನೆಯಷ್ಟೆ ರಾಜ್ಯಾಧ್ಯಂತ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳ ರಜೆಯನ್ನು ಫೆಬ್ರವರಿ 16ರವರೆಗೆ ಘೋಷಿಸಿ ಆದೇಶಿಸಲಾಗಿತ್ತು. ಆದರೆ ಪಿಯುಸಿ ತರಗತಿಗಳಿಗೆ ರಜೆ ಘೋಷಣೆಯ ನಿರ್ಧಾರ ಸರಕಾರದಿಂದ ಪ್ರಕಟಗೊಂಡಿರಲಿಲ್ಲ. ಹೈಕೋರ್ಟ್ ತೀರ್ಪಿನ ಬಳಿಕ ನಿರ್ಧಾರ ಪ್ರಕಟಿಸುವ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಇದೀಗ ಪದವಿ ಪೂರ್ವ ಕಾಲೇಜುಗಳಿಗೆ ಫೆಬ್ರವರಿ 15ರವರೆಗೆ ರಜೆಯನ್ನು ವಿಸ್ತರಣೆ ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಫೆಬ್ರವರಿ 12, 13 ರ ಭಾನುವಾರ ರಜಾ ದಿನ ಸಹಿತವಾಗಿ ಫೆಬ್ರವರಿ 14, 15ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ತರತಿಗಳಿಗೆ ಫೆ. 15ರವರೆಗೆ ರಜೆ ಘೋಷಿಸಿ ಸರಕಾರ ಆದೇಶ Rating: 5 Reviewed By: karavali Times
Scroll to Top