ಮಂಗಳೂರು, ಫೆಬ್ರವರಿ 25, 2022 (ಕರಾವಳಿ ಟೈಮ್ಸ್) : ಸಮಾಜದಲ್ಲಿ ಅಶಾಂತಿ-ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ಜನವರಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್ ಮತ್ತು ಅದರಲ್ಲಿರುವ ಇತರ 7 ಸಿಬ್ಬಂದಿಗಳ ತಂಡ ತೀವ್ರ ನಿಗಾ ವಹಿಸಿದೆ. ಇದುವರೆಗೆ 1064 ಸಾಮಾಜಿಕ ಜಾಲತಾಣ ಪೇಜ್‍ಗಳ ಮೇಲೆ, ವಾಟ್ಸಾಪ್, ಟ್ವಿಟರ್, ಟ್ರೋಲ್ ಖಾತೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ ಎಂದು ಮಂಗಳೂರು ನಗರ ಪೆÇಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪೊಲೀಸ್ ಇಲಾಖೆಯ ಸೋಶಿಯಲ್ ಮೀಡಿಯಾಗಳ ಮೇಲೆ ತೀವ್ರ ನಿಗಾ ಇರಿಸಿದೆ. ಡಿಸಿಪಿ ನೇತೃತ್ವದ 7 ಜನರಿರುವ ತಂಡ 2 ತಿಂಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, 1064 ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ ಎಂದರು. ಸಾರ್ವಜನಿಕರು ತಮ್ಮ ಖಾತೆ ಟ್ರ್ಯಾಕಿಂಗ್ ಆಗಿರುವ ಬಗ್ಗೆ ಆತಂಕ ಪಡಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಆಕ್ಷೇಪಾರ್ಹ ಪೆÇೀಸ್ಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ ಖಾತೆಗಳ ಮೇಲೆ ಮಾತ್ರ ನಿಗಾ ಇಡಲಾಗಿದೆ. ಸಾಮಾಜಿಕ ಮಾಧ್ಯಮವು ಪ್ರಬಲ ಅಸ್ತ್ರವಾಗಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಆದರೆ ಅದನ್ನು ದುರುಪಯೋಗಪಡಿಸಬೇಡಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಟ್ರೋಲ್ ಕಿಂಗ್ 193 ಎಂಬ ಇನ್‍ಸ್ಟ್ರಾ ಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೆÇೀಸ್ಟ್‍ಗಳನ್ನು ರವಾನಿಸಿದ ಆರೋಪದಲ್ಲಿ ಅದರ ಅಡ್ಮಿನ್, ಕೊಣಾಜೆ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ದೇವಸ್ಥಾನಗಳ ಬಗ್ಗೆ ಮತ್ತು ಇನ್ನೂ ಅನೇಕ ಆಕ್ಷೇಪಾರ್ಹ ಪೆÇೀಸ್ಟ್‍ಗಳನ್ನು ಈ ಪೇಜ್ ಹೊಂದಿದೆ. ಆರೋಪಿಯ ಬಳಿ ಆಕ್ಷೇಪಾರ್ಹ ಪೆÇೀಸ್ಟ್ ಮಾರ್ಫ್ ಮಾಡಲು, ಎಡಿಟ್ ಮಾಡಲು ಬೇಕಾದ ಗ್ಯಾಜೆಟ್‍ಗಳು, ಸಾಫ್ಟ್‍ವೇರ್‍ಗಳು ಇದ್ದವು. ಬಗ್ಗೆ ಸೈಬರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು. ಆರೋಪಿತ ಬಾಲಕ ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಯಾರಿಂದಲಾದರೂ ಬೆಂಬಲ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್‍ನಲ್ಲಿ ತಾನೇ ಈ ಪೆÇೀಸ್ಟ್‍ಗಳನ್ನು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೆÇಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ಕಾಮೆಂಟ್, ಲೈಕ್ ಮತ್ತು ಶೇರ್ ಮಾಡುವವರು ಸಮಾನ ಅಪರಾಧಿಗಳು, ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲ ಎನ್ನುವುದು ಕ್ಷಮಾರ್ಹವಲ್ಲ. ಅಂಡ್ರಾಯ್ಡ್ ಫೆÇೀನ್, ಆಪ್ ಇನ್‍ಸ್ಟಾಲ್, ಎಡಿಟ್, ಮಾರ್ಫ್ ಹೊಂದಿರುವ ಆರೋಪಿಯನ್ನು ಅಮಾಯಕ ಎಂದು ಹೇಳಲು ಬರುವುದಿಲ್ಲ. ಸರಕಾರಿ ಉದ್ಯೋಗ, ಆನ್‍ಲೈನ್ ಬ್ಯಾಂಕಿಂಗ್‍ಗೆ ಅರ್ಜಿ ಸಲ್ಲಿಸಲು ತಿಳಿದಿಲ್ಲದ ಕಾಲದಲ್ಲಿ ಆಕ್ಷೇಪಾರ್ಹ ಪೆÇೀಸ್ಟ್‍ನಲ್ಲಿ ಆರೋಪಿಯ ಉದ್ದೇಶಗಳು ಸ್ಪಷ್ಟವಾಗಿವೆ ಎಂದವರು ತಿಳಿಸಿದರು.
ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಖಾತೆಯಲ್ಲಿ ಹರ್ಷ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದು, ಆ ಪುಟದ ವಿರುದ್ಧ ಸುಮೊಟೊ ಪ್ರಕರಣ ದಾಖಲಾಗಿದೆ. ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೆÇೀಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಂ ಎಂಬ ಫೇಸ್ ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ
ಮಣಿಪಾಲ ಮತ್ತು ಮುಲ್ಕಿ ಮೂಲದ ತಲಾ ಒಬ್ಬೊಬ್ಬರನ್ನು ಈ ಸಂಬಂಧ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಂಗಳೂರು ಮುಸ್ಲಿಂ ಎಂಬ ಖಾತೆಯ ಕುರಿತು ತನಿಖೆ ಮುಂದುವರೆದಿದ್ದು, ಮೂಲವನ್ನು ಪತ್ತೆ ಹಚ್ಚಲಾಗುವುದು. 2016ರಲ್ಲಿ ಮಂಗಳೂರು ಮುಸ್ಲಿಂ ಪೇಜ್‍ನಲ್ಲಿ ಆಕ್ಷೇಪಾರ್ಹ ಪೆÇೀಸ್ಟ್ ಹಾಕಿದ್ದು, ನ್ಯಾಯಾಲಯದ ಆದೇಶದ ಮೂಲಕ ಪುಟವನ್ನು ನಿರ್ಬಂಧಿಸಲಾಗಿತ್ತು. ಇದೀಗ ಈ ಪುಟದ ವರ್ಣಮಾಲೆಯಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ಇದೀಗ ಮತ್ತೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕಮಿಷನರ್ ತಿಳಿಸಿದರು.
ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ 40 ಸದಸ್ಯರನ್ನು ಒಳಗೊಂಡ ವಾಟ್ಸಾಪ್ ಗುಂಪಿನ ಮೇಲೆ ಕೂಡಾ ನಿಗಾ ಇರಿಸಲಾಗಿದ್ದು. ಈ ಗ್ರೂಪ್ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಮತ್ತು ಅವರ ಪೆÇೀಷಕರಿಗೆ ಆಕ್ಷೇಪಾರ್ಹ ಪೆÇೀಸ್ಟ್ ಮತ್ತು ಸಂದೇಶಗಳ ಮೂಲಕ ಬೆದರಿಕೆ ಹಾಕುತ್ತಿದ್ದರು. ಬುರ್ಖಾ ಧರಿಸಿದ ಮುಸ್ಲಿಂ ಹುಡುಗಿಯರು ಮಾಲ್ ಮತ್ತು ಥಿಯೇಟರ್‍ಗಳಿಗೆ ಸುತ್ತಾಡುವಂತಿಲ್ಲ. ಹೆಣ್ಣು ಮಕ್ಕಳ ತಿರುಗಾಟ ಪೆÇೀಷಕರು ತಡೆಯಬೇಕು, ಇಲ್ಲದಿದ್ದರೆ ಮಾಲ್‍ಗಳು ಮತ್ತು ಥಿಯೇಟರ್‍ಗಳಲ್ಲಿ ಓಡಾಡುವವರನ್ನು ನಾವು ತಡೆಯಬೇಕಾಗುತ್ತದೆ ಎಂದು ವಾಟ್ಸಪ್ ಪೇಜ್ ಹೇಳಿಕೊಂಡಿದೆ ಎಂದು ಶಶಿಕುಮಾರ್ ವಿವರಿಸಿದರು.
0 comments:
Post a Comment