ವಾಷಿಂಗ್ಟನ್, ಫೆಬ್ರವರಿ 04, 2022 (ಕರಾವಳಿ ಟೈಮ್ಸ್) : ಅತ್ಯಮತ ಜನಪ್ರಿಯ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಪ್ ಶೀಘ್ರದಲ್ಲೇ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಲಿದೆ. ಹೊಸ ಫೀಚರ್ ಪ್ರಕಾರ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತಿದ್ದು, ಗ್ರೂಪಿನ ಇತರ ಸದಸ್ಯರು ಕಳಿಸುವ ಮೆಸೇಜ್, ಇಮೇಜ್ ಹಾಗೂ ವೀಡಿಯೋಗಳನ್ನು ಅಳಿಸಿ ಹಾಕುವ ಅಧಿಕಾರ ನೀಡಲಿದೆ. ಈಗಾಗಲೇ ವಾಟ್ಸಪ್ ಈ ಫೀಚರನ್ನು ಬಳಕೆದಾರರಿಗೆ ಲಭ್ಯವಾಗಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.
ಈ ವೈಶಿಷ್ಯ ಬಳಕೆಗೆ ಬಂದ ಬಳಿಕ ಗ್ರೂಪ್ ಅಡ್ಮಿನ್ ಇತರರು ಕಳುಹಿಸುವ ಅಶ್ಲೀಲ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಸುಲಭವಾಗಿ ಅಳಿಸಲು ಸಾಧ್ಯವಾಗಲಿದೆ. ಗ್ರೂಪ್ ನಿರ್ವಾಹಕ ಸಂದೇಶ ಅಳಿಸಿದ ಬಳಿಕ ಇತರ ಸದಸ್ಯರಿಗೆ ದಿಸ್ ವಾಸ್ ಡಿಲಿಟೆಡ್ ಬೈ ಆನ್ ಅಡ್ಮಿನ್ (ಈ ಸಂದೇಶ ನಿರ್ವಾಹಕರಿಂದ ಅಳಿಸಲಾಗಿದೆ) ಎಂದು ಗೋಚರಿಸಲಿದೆ.
ನೀವು ಗ್ರೂಪ್ ಅಡ್ಮಿನ್ ಆಗಿದ್ದರೆ ಮುಂದಿನ ವಾಟ್ಸಪ್ ಆಂಡ್ರಾಯ್ಡ್ ಬೀಟಾ ಅಪ್ಡೇಟ್‍ಗಳಲ್ಲಿ ನೀವು ಗ್ರೂಪ್‍ನ ಯಾವುದೇ ಸಂದೇಶಗಳನ್ನು ಅಳಿಸಲು ಸಾಧ್ಯವಾಗಲಿದೆ ಎಂದು ವೆಬಿಟೈನ್ಫೋ ತಿಳಿಸಿದೆ. ವಾಟ್ಸಪ್ ವೆಬ್‍ನಲ್ಲಿ ಎರಡು ಹಂತಗಳ ಪರಿಶೀಲನೆಯ (ಟು ಸ್ಟೆಪ್ ವೆರಿಫಿಕೇಷನ್) ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸುತ್ತಿದೆ. ಮುಂದಿನ ಅಪ್ಡೇಟ್‍ಗಳಲ್ಲಿ ಅದನ್ನು ಜನರು ಬಳಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ. ಟು ಸ್ಟೆಪ್ ವೆರಿಫಿಕೇಷನ್ ಸೌಲಭ್ಯ ಈಗಾಗಲೇ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿದೆ.
ಇತ್ತೀಚೆಗೆ ವಾಟ್ಸಪ್‍ನಲ್ಲಿ ಫೆÇೀಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ವಿಧಾನವನ್ನೂ ಬದಲಾಯಿಸುವುದಾಗಿ ವಾಟ್ಸಪ್ ತಿಳಿಸಿತ್ತು. ಇದರ ಬಗ್ಗೆ ಬೀಟಾ ಅಪ್ಡೇಟ್‍ನಲ್ಲಿ ಸುಳಿವು ನೀಡಿತ್ತು.
0 comments:
Post a Comment