ಎಪಿಎಲ್ ಸೀಸನ್-6 : ಪ್ರಥಮ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಮೂಡಿ ಬಂದ ನ್ಯೂಸ್ಟಾರ್ ತಂಡ, ಪ್ಲೇಬಾಯ್ಸ್ ರನ್ನರ್ಸ್ - Karavali Times ಎಪಿಎಲ್ ಸೀಸನ್-6 : ಪ್ರಥಮ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಮೂಡಿ ಬಂದ ನ್ಯೂಸ್ಟಾರ್ ತಂಡ, ಪ್ಲೇಬಾಯ್ಸ್ ರನ್ನರ್ಸ್ - Karavali Times

728x90

13 March 2022

ಎಪಿಎಲ್ ಸೀಸನ್-6 : ಪ್ರಥಮ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಮೂಡಿ ಬಂದ ನ್ಯೂಸ್ಟಾರ್ ತಂಡ, ಪ್ಲೇಬಾಯ್ಸ್ ರನ್ನರ್ಸ್


ಬಂಟ್ವಾಳ, ಮಾರ್ಚ್ 13, 2022 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-6 ಕ್ರಿಕೆಟ್ ಪಂದ್ಯಾಟದಲ್ಲಿ ಸಿರಾಜ್ ಮಾಲಕತ್ವ ಹಾಗೂ ಮುಸ್ತಫಾ ನಾಯಕತ್ವದ ನ್ಯೂಸ್ಟಾರ್ ತಂಡ ಚಾಂಪಿಯನ್ ಆಗಿ ಮೂಡಿಬಂತು. ಎಪಿಎಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹೆಸರು ನೋಂದಾಯಿಸಿಕೊಂಡ ನ್ಯೂಸ್ಟಾರ್ ತಂಡ ಪ್ರಥಮ ಸರಣಿಯಲ್ಲೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ರಿಯಾಝ್ ಎಸ್ ಆರ್ ಮಾಲಕತ್ವ ಹಾಗೂ ಹನೀಫ್ ಸಿ ಪಿ ನಾಯಕತ್ವದ ಪ್ಲೇಬಾಯ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಡೆದುಕೊಂಡಿತು. 

ಪ್ಲೇಬಾಯ್ಸ್ ತಂಡದ ಹನೀಫ್ ಸಿ ಪಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ನ್ಯೂಸ್ಟಾರ್ ತಂಡದ ನೌಫಲ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು, ಎಸ್ ಎಸ್ ವಾರಿಯರ್ಸ್ ತಂಡದ ಆಸಿಫ್ ಮಾಡೂರು ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಯುವಕರು ಕೋಮುವಾದಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ಸಾಮಾಜಿಕ ಬದ್ದತೆ ಹಾಗೂ ದೇಶದ ಸೌಹಾರ್ದ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. 

ಅಮೆಚೂರು ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಯುವಕರು ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಆ ಮೂಲಕ ಔದ್ಯೋಗಿಕ ಭವಿಷ್ಯವನ್ನು ಕಂಡುಕೊಳ್ಳುವ ಅವಕಾಶವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು. 

ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಯುವಕರು ದೇಶದ ಆಸ್ತಿಯಾಗಿದ್ದು, ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲು, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಅಬ್ದುಲ್ ಮಜೀದ್ ನಾಝ್, ಅಬ್ದುಲ್ ಹಕೀಂ ಉಲ್ಲಾಸ್, ಫಾರೂಕ್ ಎಫ್ ಆರ್ ಕೆ, ನಾಸಿರ್ ಗೂಡಿಬಳಿ, ರಫೀಕ್ ಎಂ ಆರ್, ರಿಯಾಝ್ ಆಲಡ್ಕ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಪ್ರಮುಖರಾದ ಖಲಂದರ್ ಅಮ್ಟೂರು, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಅಬ್ದುಲ್ ರವೂಫ್ ಗುಡ್ಡೆಅಂಗಡಿ, ಶರೀಫ್ ಭೂಯಾ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಅಂಡರ್ ಆರ್ಮ್ ಕ್ರಿಕೆಟ್ ಪಟು ಅಝ್ಮಲ್ ಪಿ ಜೆ ಹಾಗೂ ಹಿರಿಯ ವಾಲಿಬಾಲ್ ಆಟಗಾರ ಅಬೂಬಕ್ಕರ್ ಸಿದ್ದೀಕ್ ಬಂಗ್ಲೆಗುಡ್ಡೆ ಅವರನ್ನು ಸನ್ಮಾನಿಸಲಾಯಿತು. 

ಭೂಯಾ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳಾದ ಅಝರುದ್ದೀನ್ ಯು, ಚಪ್ಪು ಪಿ ಎಂ, ಶಫೀಕ್ ಯು, ಅಶ್ರಫ್ ಯು., ಹಬೀಬ್ ಬಿ, ರಶೀದ್ ಕತಾರ್, ರಿಝ್ವಾನ್ ಪಿಜೆ, ತೌಸೀಫ್ ಯು, ಹಬೀಬ್ ಬಿ, ಸದಕತ್, ಝುಬೈರ್, ನೌಫಲ್ ಬಿ, ನೌಫಲ್ ಯು, ಆರಿಫ್ ಭೂಯಾ, ನಿಝಾಂ ಜಿಬಿ, ಮುಝಮ್ಮಿಲ್ ಬಿ, ರಿಯಾಝ್ ಎಸ್ ಆರ್, ಇರ್ಶಾದ್ ಇಚ್ಚ, ಇಬ್ರಾಹಿಂ ಬಾವಾಜಿ, ಸಾದಿಕ್, ರಫೀಕ್ ಮಮ್ಮು ಮೊದಲಾದವರು ಉಪಸ್ಥಿತರಿದ್ದರು. 

ಕೂಟದಲ್ಲಿ ತೀರ್ಪುಗಾರರಾಗಿ ನಿಸಾರ್ ಅಕ್ಕರಂಗಡಿ, ಹನೀಫ್ ಅಕ್ಕರಂಗಡಿ ಕಾರ್ಯನಿರ್ವಹಿಸದರೆ, ಸ್ಕೋರ್ ಬೋರ್ಡ್ ವಿಭಾಗದಲ್ಲಿ ಸಲಾಲ್ ಗೂಡಿನಬಳಿ ಕಾರ್ಯನಿರ್ವಹಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 

ಕೂಟದಲ್ಲಿ ಅರ್ಮಾನ್ ಅಜ್ಜು ಮಾಲಕತ್ವದ ಬೀಯಿಂಗ್ ಭೂಯಾ, ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್ ಎಸ್ ವಾರಿಯರ್ಸ್, ಖಲಂದರ್ ಮಾಲಕತ್ವದ ಎ ಟು ಝಡ್, ರಿಝ್ವಾನ್ ಪಿಜೆ ಮಾಲಕತ್ವದ ಪಿ ಜೆ ಸ್ಟಾರ್ಸ್ ತಂಡಗಳು ಭಾಗವಹಿಸಿತ್ತು. 

  • Blogger Comments
  • Facebook Comments

0 comments:

Post a Comment

Item Reviewed: ಎಪಿಎಲ್ ಸೀಸನ್-6 : ಪ್ರಥಮ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಮೂಡಿ ಬಂದ ನ್ಯೂಸ್ಟಾರ್ ತಂಡ, ಪ್ಲೇಬಾಯ್ಸ್ ರನ್ನರ್ಸ್ Rating: 5 Reviewed By: karavali Times
Scroll to Top